Saturday, March 25, 2023

Latest Posts

ಸ್ವಿಗ್ಗಿ ಬಳಿಕ ಇದೀಗ ಭಾರತ್ ಮ್ಯಾಟ್ರಿಮೊನಿಯಿಂದ ಹೋಳಿ ಹಬ್ಬಕ್ಕೆ ಅವಮಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೋಳಿ ಹಬ್ಬದ ಪ್ರಯುಕ್ತ ನೂತನ ವಿಡಿಯೋವೊಂದನ್ನು ಭಾರತ್ ಮ್ಯಾಟ್ರಿಮೊನಿ ರಿಲೀಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಜಾಹೀರಾತಿನಲ್ಲಿ ಏನಿದೆ?
ಮಹಿಳೆಯೊಬ್ಬಳು ಹೋಳಿ ಹಬ್ಬದ ಬಣ್ಣಗಳ ಮಿಂದೆದಿದ್ದಾಳೆ. ತದನಂತರ ಮುಖ ತೊಳೆದು ಬಣ್ಣಗಳನ್ನು ಕಳಚುತ್ತಾಳೆ. ಮುಖದಲ್ಲಿ ಬಣ್ಣಗಳು ಹೋದ ನಂತರ ಆಕೆ ಮುಖದಲ್ಲಿ ಹಲ್ಲೆಯಾದ ಕಲೆಗಳು ಹಾಗೇ ಉಳಿದಿರುತ್ತವೆ. ಈ ಬಾರಿ ಮಹಿಳಾ ದಿನದಂದು ಹಾಗೂ ಹೋಳಿಯಂದು ಹೆಣ್ಣುಮಕ್ಕಳಿಗೆ ಇನ್ನಷ್ಟು ಸುರಕ್ಷಿತ ವಾತಾವರಣ ಕಲ್ಪಿಸೋಣ, ಹೋಳಿ ಸಮಯದಲ್ಲಿ ಆಗುವ ಹಲ್ಲೆಗಳು ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಸೇಫ್ ಆದ ಹೋಳಿ ಆಡೋಣ ಎಂದು ಹೇಳಲಾಗಿದೆ.

ವಿರೋಧ ಯಾಕೆ?
ಹೋಳಿ ಹಣ್ಣದಲ್ಲಿ ಹೆಣ್ಣುಮಕ್ಕಳಿಗೆ ಘಾಸಿಯಾಗುವಂತಹ ಘಟನೆಗಳು ನಡೆಯುತ್ತವೆ ಎಂದು ಜಾಹೀರಾತಿನಲ್ಲಿ ಹೇಳಿದ್ದಕ್ಕೆ ಕೆಲ ವರ್ಗದ ಜನರಿಗೆ ಇರಿಸು ಮುರಿಸಾಗಿದೆ. ಹೋಳಿ ಬಣ್ಣದ, ತಮಾಷೆಯ ಖುಷಿಯಾದ ಹಬ್ಬ. ಹಬ್ಬಕ್ಕೆ ಅವಮಾನ ಆಗುವಂಥ ಜಾಹೀರಾತಿದು ಎನ್ನುವುದು ಟೀಕೆಯ ಮುಖ್ಯ ಅಂಶವಾಗಿದೆ.

ಇದರಲ್ಲಿ ತಪ್ಪೇನಿದೆ?
ಹೋಳಿ ಹಬ್ಬದ ಸಂಭ್ರಮದಲ್ಲಿ ಕೆಲ ಹೆಣ್ಣುಮಕ್ಕಳು ಮಾನಸಿಕವಾಗಿ ನೋವು ಅನುಭವಿಸುತ್ತಾರೆ. ಹೋಳಿ ಹಬ್ಬದ ನೆಪದಲ್ಲಿ, ಬಣ್ಣ ಹಚ್ಚುವಾಗ ಒಪ್ಪಿಗೆಯಿಲ್ಲದೆ ಬಣ್ಣ ಹಚ್ಚುವುದು, ಖಾಸಗಿ ಅಂಗಗಳನ್ನು ಮುಟ್ಟುವ ಸಾಕಷ್ಟು ಪ್ರಕರಣಗಳಿವೆ. ಜಾಹೀರಾತಿನಲ್ಲಿ ತಪ್ಪಿಲ್ಲ ಎನ್ನುವ ಕಮೆಂಟ್‌ಗಳೂ ಬಂದಿವೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!