ಸೂಪರ್‌ಮಾರ್ಕೆಟ್‌ ಆಯ್ತು ಇದೀಗ ಚರ್ಚ್‌ ಮೇಲೆ ಗುಂಡಿನ ದಾಳಿ: ಓರ್ವ ಸಾವು, ಐವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ಪಶ್ಚಿಮ ರಾಜ್ಯ ಕ್ಯಾಲಿಫೋರ್ನಿಯಾದ ಚರ್ಚ್‌ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಆರೆಂಜ್ ಕೌಂಟಿ ಶೆರಿಫ್ ಇಲಾಖೆ ತಿಳಿಸಿದೆ. ಲಗುನಾ ವುಡ್ಸ್ ನಗರದ ಎಲ್ ಟೊರೊ ರಸ್ತೆಯ 24000 ಬ್ಲಾಕ್‌ನಲ್ಲಿರುವ ಚರ್ಚ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಮಧ್ಯಾಹ್ನ 1:26ಕ್ಕೆ ಜಿನೀವಾ ಪ್ರೆಸ್ಬಿಟೇರಿಯನ್ ಚರ್ಚ್‌ನೊಳಗೆ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಒಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳದಲ್ಲಿದ್ದ ಓರ್ವ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತು ಆತನ ಬಳಿಯಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ವಿಚಾರವನ್ನು ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರ ಕಚೇರಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ʻಲಗುನಾ ವುಡ್ಸ್‌ ಚರ್ಚ್‌ನಲ್ಲಿ ನಡೆದ ಘಟನೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸುತ್ತೇವೆ. ಜನ ಚರ್ಚ್‌ಗೆ ಹೋಗಲು ಯಾರೂ ಭಯಪಡಬೇಕಾಗಿಲ್ಲ. ಸರ್ಕಾರ ಸದಾ ಜನರ ಜೊತೆಯಲ್ಲಿರುತ್ತದೆ. ಯಾರೂ ಭಯಪಡುವ ಅವಶ್ಯಕತೆ ಇಲ್ಲʼ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!