April 7, 2026
Tuesday, April 7, 2026
spot_img

ಇರಾನ್ ಮೇಲೆ ಮತ್ತೆ ಭೀಕರ ದಾಳಿಗೆ ಅಮೆರಿಕ ಪ್ಲಾನ್: ಭಾರತೀಯರಿಗೆ ಹೈ ಅಲರ್ಟ್ ಘೋಷಿಸಿದ ರಾಯಭಾರ ಕಚೇರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೂಳ್ಳುತ್ತಿದ್ದು, ಒಂದೆಡೆ ಇರಾನ್‌ಗೆ ಟ್ರಂಪ್ ನೀಡಿದ್ದ ಗಡವು ಮುಗಿಯುತ್ತಿದ್ದು, ಮತ್ತೊಂದೆಡೆ ಇಸ್ರೇಲ್, ಅಮೆರಿಕ ಮತ್ತೆ ದಾಳಿ ಶುರು ಮಾಡಿಕೊಂಡಿದೆ . ಹೀಗಾಗಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಪ್ರಜೆಗಳಿಗೆ ತುರ್ತು ಸಂದೇಶ ನೀಡಿದ್ದು, 48 ಗಂಟೆಗಳ ಕಾಲ ಎಲ್ಲಿ ಇದ್ದೀರಿ ಅಲ್ಲಿಯೇ ಇರುವಂತೆ ಸೂಚನೆ ನೀಡಿದೆ.

ಮತ್ತೆ ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದು, ಈ ಹಿನ್ನೆಲೆ ಇರಾನ್ ದೇಶದಲ್ಲಿರುವ ಭಾರತೀಯ ಪ್ರಜೆಗಳು ಸುರಕ್ಷತೆಗೆ ಕನಿಷ್ಠ 48 ಗಂಟೆಗಳ ಕಾಲ ಅನಗತ್ಯ ಓಡಾಟ ಮಾಡದೆ ಮನೆಯೊಳಗೆ ಇರಬೇಕೆಂದು ಸೂಚಿಸಿದೆ.

ಈಗಾಗಲೇ ಟ್ರಂಪ್ ಇರಾನ್ ಅಂತ್ಯಕ್ಕೆ ಶಪಥ ಮಾಡಿಕೊಂಡಿದ್ದು, ಮುಂದಿನ ಗಂಟೆಗಳಲ್ಲಿ ಭೀಕರ ದಾಳಿಯ ಸಾಧ್ಯತೆಗಳಿದ್ದು, ಹೀಗಾಗಿ ಯಾರು ಕೂಡ ಬಹುಮಹಡಿ ಕಟ್ಟಡಗಳ ಮೇಲಿನ ಮಹಡಿಗಳಲ್ಲಿ ಇರದಂತೆ ಭಾರತೀಯರಿಗೆ ಸೂಚಿಸಿದೆ . ರಾಯಭಾರ ಕಚೇರಿಯಿಂದ ವ್ಯವಸ್ಥೆ ಮಾಡಲಾದ ಹೊಟೇಲ್ ಗಳಲ್ಲಿ ಇರುವ ಜನರು ಸ್ಥಳದಲ್ಲೇ ಇರುವ ರಾಯಭಾರ ಕಚೇರಿಯ ಸಿಬ್ಬಂದಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಲು ಸೂಚನೆ ನೀಡಿದೆ. ರಾಯಭಾರ ಕಚೇರಿಯ ತುರ್ತು ಸಂಖ್ಯೆಗಳು 989128109115, 989128109102, 989128109109, 989932179359 ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !