October 15, 2026
Thursday, October 15, 2026
spot_img

ಗಡುವು ಮುಗಿಯುವ ಮುನ್ನವೇ ಇರಾನ್​ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಕದನ ಭೀಕರ ಸ್ವರೂಪ ಪಡೆದುಕೊಂಡಿದ್ದು, ಟ್ರಂಪ್ ನೀಡಿದ್ದ ಡೆಡ್‌ಲೈನ್ ಮುಗಿಯುವ ಮೊದಲೇ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮುಗಿಬಿದ್ದಿದ್ದು, ಖಾರ್ಗ್ ದ್ವೀಪದ ಮೇಲೆ ಸರಣಿ ದಾಳಿ ನಡೆಸಿದೆ.

ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಸರಣಿ ವೈಮಾನಿಕ ದಾಳಿಗಳು ನಡೆದಿದ್ದು, ಶೇ. 90ಕ್ಕೂ ಹೆಚ್ಚು ಕಚ್ಚಾ ತೈಲ ರಫ್ತಿಗೆ ಇದು ಆಧಾರವಾಗಿದೆ.

ಅಮೆರಿಕದ ಮಿಲಿಟರಿ ಪಡೆ 50ಕ್ಕೂ ಹೆಚ್ಚು ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದು, ಪ್ರಮುಖ ಬಂಕರ್‌ಗಳು,ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗನ್ನು ನಾಶಗೊಳಿಸಿದೆ.

ಇತ್ತ ಇಸ್ರೇಲ್ ಕೂಡ ಅಮೆರಿಕದ ಜೊತೆ ಸೇರಿ ಇರಾನ್ ಮೇಲೆ ಭೀಕರ ದಾಳಿ ನಡೆಸಿದ್ದು, ಈ ಕುರಿತು ಇಸ್ರೇಲ್ ಸೇನೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಹತ್ತಾರು ಮೂಲಸೌಕರ್ಯ ಕೇಂದ್ರಗಳ ಮೇಲೆ ದಾಳಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದೆ.

ತೈಲ ಕೇಂದ್ರಗಳಷ್ಟೇ ಅಲ್ಲದೆ, ಇರಾನ್‌ನ ಸಾರಿಗೆ ಮತ್ತು ಸಂವಹನ ವ್ಯವಸ್ಥೆ ಮೇಲೂ ಭೀಕರ ದಾಳಿ ನಡೆದಿದ್ದು, ಕೋಮ್‌ನ ಹೊರವಲಯದಲ್ಲಿರುವ ಪ್ರಮುಖ ಸೇತುವೆ, ಕಾಶಾನ್ ನಗರದ ಯಹ್ಯಾ ಅಬಾದ್ ರೈಲ್ವೆ ಸೇವೆಗಳನ್ನು ಅಮೆರಿಕ-ಇಸ್ರೇಲ್ ಕ್ಷಿಪಣಿಗಳು ಧ್ವಂಸಗೊಳಿಸಿವೆ.

Must Read