ಅಮೆರಿಕ ಅಧ್ಯಕ್ಷ ಬಿಡೆನ್ ರ ‘ಸಹಿಷ್ಣು, ಲಿಬರಲ್’ ಪರದೆ ಕಳಚಿಬಿತ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಫಾಕ್ಸ್ ನ್ಯೂಸ್ ವೈಟ್ ಹೌಸ್ ವರದಿಗಾರ ಪೀಟರ್ ಡೋಸಿಯನ್ನು ಲೈವ್ ಟೆಲಿಕಾಸ್ಟ್‌ನಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಹಣದುಬ್ಬರ ನಿಮಗೊಂದು ರಾಜಕೀಯ ಹೊರೆಯಾಗಿದೆಯಲ್ಲವೇ? ಎಂದು ವರದಿಗಾರ ಪ್ರಶ್ನಿಸಿದ್ದಕ್ಕೆ ಲೈವ್ ಟೆಲಿಕಾಸ್ಟ್‌ನಲ್ಲಿಯೇ ಜೋ ಬಿಡೆನ್ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ.

ಹಣದುಬ್ಬರವನ್ನು ಎದುರಿಸಲು ಬಿಡೆನ್ ಆಡಳಿತ ಏನೇನು ಪ್ರಯತ್ನ ಮಾಡುತ್ತಿದೆ ಎನ್ನುವ ಕುರಿತು ಶ್ವೇತಭವನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಉಕ್ರೇನ್‌ನ ಮಿಲಿಟರಿ ಬಗ್ಗೆಯೇ ಎಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ ಎಂದು ವರದಿಗಾರರ ಮೇಲೆ ಜೋ ಬಿಡೆನ್ ಗರಂ ಆಗಿದ್ದರು. ಈ ವೇಳೆ ವರದಿಗಾರ ಡೂಕಿ ಹಾಗಾದರೆ ಹಣದುಬ್ಬರದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದಾ? ಮಧ್ಯಾವಧಿ ಚುನಾವಣೆಗಳು ಎದುರಿಗಿರುವಾಗ ನಿಮಗೆ ರಾಜಕೀಯವಾಗಿ ಹೊರೆಯಾಗುವುದಿಲ್ಲವೇ?  ಎಂದು ಪ್ರಶ್ನಿಸಿದ್ದಾರೆ.

ಮೈಕ್ ಆಫ್ ಆಗಿದೆ ಎಂದು ತಿಳಿದ ಬಿಡೆನ್, ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತ “ಹೆಚ್ಚೆಚ್ಚು ಹಣದುಬ್ಬರ ಎಂದರೆ ಹೆಚ್ಚು ಆಸ್ತಿ ಮಾಡಿದಂತೆ” ಎಂದು ಹೇಳುತ್ತ ವರದಿಗಾರನಿಗೆ ಬೈಗುಳದ ಶಬ್ದ ಪ್ರಯೋಗಿಸಿದ್ದಾರೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!