Thursday, March 30, 2023

Latest Posts

ಕ್ಯಾನ್ಸರ್ ನಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುಣಮುಖ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಇದೀಗ ಗುಣಮುಖರಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಶ್ವೇತಭವನದ ವೈದ್ಯ ಕೆವಿನ್ ಓ’ಕಾನರ್ ಶುಕ್ರವಾರ ತಿಳಿಸಿದ್ದಾರೆ.

80 ವರ್ಷ ಪ್ರಾಯದ ಅಮೆರಿಕ ಅಧ್ಯಕ್ಷರಿಗೆ (US President) ಎದೆಯಲ್ಲಿ ಚರ್ಮದ ಗಾಯದ ರೂಪದಲ್ಲಿ ಕ್ಯಾನ್ಸರ್ (Cancer) ಇದ್ದಿದ್ದು, ಅದನ್ನು ಫೆಬ್ರವರಿ ತಿಂಗಳಿನಲ್ಲಿ ತೆಗೆದುಹಾಕಲಾಗಿದೆ.

ಅವರ ಎಲ್ಲಾ ಕ್ಯಾನ್ಸರ್ ಅಂಗಾಂಶಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ.ಆರೋಗ್ಯದ ರಕ್ಷಣೆಯ ಭಾಗವಾಗಿ ಕಣ್ಗಾವಲು ಮುಂದುವರಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಫೆಬ್ರವರಿ 16ರಂದು ಬೈಡನ್ ಅವರ ವಾರ್ಷಿಕ ವೈದ್ಯಕೀಯ ತಪಾಸಣೆಯ ವೇಳೆ ಎದೆಯ ಮೇಲಿದ್ದ ಗಾಯವನ್ನು ತೆಗೆದುಹಾಕಲಾಗಿತ್ತು. ಬಳಿಕ ಅವರು ಕರ್ತವ್ಯಕ್ಕೆ ಯೋಗ್ಯ ಎಂದು ಘೋಷಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!