ಆಸ್ಟ್ರೇಲಿಯಾದ ಹಿಂದು ದೇವಾಲಯದಲ್ಲಿ ಮತ್ತೆ ಮೋದಿ ವಿರೋಧಿ ಬರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದು ದೇವಾಲಯದಲ್ಲಿ (Hindu Temple) ಭಾರತ (India) ಹಾಗೂ ಮೋದಿ (Narendra Modi) ವಿರೋಧಿ ಬರಹಗಳನ್ನು ಗೀಚಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಇದು 2 ತಿಂಗಳಲ್ಲಿ ನಡೆದಿರುವ 4ನೇ ಘಟನೆಯಾಗಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ದಕ್ಷಿಣ ಭಾಗದಲ್ಲಿನ ಬರ್ಬ್ಯಾಂಕ್ ಉಪನಗರದಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯವನ್ನು ಖಲಿಸ್ತಾನಿ ಬೆಂಬಲಿಗರು ವಿರೂಪಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ಬೆಳಗ್ಗೆ ಭಕ್ತರು ಪೂಜೆ ಸಲ್ಲಿಸಲು ದೇವಾಲಯಕ್ಕೆ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಇದು ಅತ್ಯಂತ ಖಂಡನೀಯ ಕೃತ್ಯವಾಗಿದ್ದು, 7 ದಿನಗಳಲ್ಲಿ ನಡೆದಿರುವ 2ನೇ ಘಟನೆ ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ತಿಳಿಸಿದ್ದಾರೆ.

ಈ ಹಿಂದೆ ಬ್ರಿಸ್ಬೇನ್‌ನಲ್ಲಿರುವ ಮತ್ತೊಂದು ಹಿಂದೂ ದೇವಾಲಯ ಗಾಯತ್ರಿ ಮಂದಿರಕ್ಕೆ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಖಲಿಸ್ತಾನ್ ಭಯೋತ್ಪಾದಕರಿಂದ ಬೆದರಿಕೆ ಕರೆಗಳು ಬಂದಿವೆ. ಇದು ಸಿಖ್ ಫಾರ್ ಜಸ್ಟಿಸ್ (SFJ) ಮಾದರಿಯಾಗಿದೆ ಎಂದು ಹಿಂದೂ ಮಾನವ ಹಕ್ಕುಗಳ ನಿರ್ದೇಶಕಿ ಸಾರಾ ಎಲ್ ಗೇಟ್ಸ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!