ಟಿ20 ವಿಶ್ವಕಪ್‌ ರಾಯಭಾರಿಯಾಗಿ ಉಸೇನ್ ಬೋಲ್ಟ್‌ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಐಪಿಎಲ್ ಸಂಭ್ರಮದ ಜೊತೆಗೆ ಇಡೀ ವಿಶ್ವವೇ ಟಿ20 ವಿಶ್ವಕಪ್ ಆರಂಭಕ್ಕೆ ಕಾಯುತ್ತಿದ್ದು, ಈ ಚುಟುಕು ಸಮರ ಜೂನ್ 2 ರಿಂದ ಆರಂಭವಾಗಲಿದೆ.

ಈ ಬಾರಿ ಮೊದಲ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಈ ಟೂರ್ನಿಗೆ ಆತಿಥ್ಯವಹಿಸುತ್ತಿವೆ.ಅಮೇರಿಕಾದಲ್ಲಿ ಕ್ರಿಕೆಟ್ ಸಾಮ್ರಾಜ್ಯ ಸ್ಥಾಪಿಸುವ ಸಲುವಾಗಿ ಐಸಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅದರ ಪ್ರಯುಕ್ತ ಇದೀಗ ತನ್ನಒಲಂಪಿಕ್ಸ್​ನಲ್ಲಿ ಚಿನ್ನದ ಪದಕಗಳ ಭೇಟೆಯಾಡಿದ್ದ ಜಮೈಕಾದ ಶರ ವೇಗದ ಸರದಾರ ಉಸೇನ್ ಬೋಲ್ಟ್‌ ಅವರನ್ನು ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

8 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಅವರನ್ನು ಏಪ್ರಿಲ್ 24 ಬುಧವಾರದಂದು ಟಿ20 ವಿಶ್ವಕಪ್ 2024 ರ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ.

ರಾಯಭಾರಿಯಾಗಿ ನಾಮನಿರ್ದೇಶನವಾದ ಬಳಿಕ ಮಾತನಾಡಿದ ಬೋಲ್ಟ್, ಅಮೆರಿಕ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಟೂರ್ನಿಗಳಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇನೆ. ಮುಂಬರುವ ಟಿ20 ವಿಶ್ವಕಪ್‌ಗೆ ರಾಯಭಾರಿಯಾಗಲು ನಾನು ರೋಮಾಂಚನಗೊಂಡಿದ್ದೇನೆ. ಕ್ರಿಕೆಟ್ ಜೀವನದ ಭಾಗವಾಗಿರುವ ಕೆರಿಬಿಯನ್‌ನಿಂದ ಬಂದ ನನ್ನ ಹೃದಯದಲ್ಲಿ ಈ ಆಟವು ಯಾವಾಗಲೂ ವಿಶೇಷ ಸ್ಥಾನವನ್ನು ಪಡೆದಿದೆ. ಇಂತಹ ಪ್ರತಿಷ್ಠಿತ ಪಂದ್ಯಾವಳಿಯ ಭಾಗವಾಗಿರುವುದು ನನಗೆ ಗೌರವವಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!