ಹಿಂದುಗಳು ಬಹುಸಂಖ್ಯಾತರಾಗಿರುವವರೆಗೆ ಮಾತ್ರ ಶಾಂತಿ ನೆಲೆಸಲು ಸಾಧ್ಯ: ಜಡೆ ಹಿರೇಮಠದ ಶ್ರೀ

 ಹೊಸದಿಗಂತ ವರದಿ, ಶಿವಮೊಗ್ಗ:

ಭಾರತದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿರುವವರೆಗೆ ಮಾತ್ರ ಶಾಂತಿ ನೆಲೆಸಲು ಸಾಧ್ಯ. ಇನ್ನುಳಿದ ಮತೀಯರು ಹೆಚ್ಚಾದಂತೆಲ್ಲ ಆ ದೇಶ ಅಶಾಂತಿ, ಕ್ಷೋಭೆಯ ತಾಣವಾಗಿ ಮಾರ್ಪಡಲಿದೆ ಎಂದು ಸೊರಬ ಜಡೆ ಹಿರೇಮಠದ ಶ್ರೀ ಅಮರೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳು ತಿಳಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಗೈದ ಕ್ರೂರಿ ಫಯಾಜ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ, ಬುಧವಾರ ಪಟ್ಟಣದಲ್ಲಿ ತಾಲೂಕಿನ ಎಲ್ಲಾ ಮಠಾಧೀಶರ ಮತ್ತು ಹಿಂದು ಸಂಘಟನೆಗಳ ಸಂಘ ಸಂಸ್ಥೆಗಳ ಕಾರ್ಯಕರ್ತರು ಮತ್ತು ವಿವಿಧ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹಿಂದೂ ದೇಶದ ವಾರಸುದಾರರು ಹಿಂದುಗಳಾಗಿದ್ದು, ಈ ದೇಶದ ಉಳಿವಿಗಾಗಿ ಹಿಂದುಗಳ ರಕ್ತ, ಬೆವರು, ಪ್ರಾಣವನ್ನೇ ಅರ್ಪಣೆ ಮಾಡಲಾಗಿದೆ. ಇಲ್ಲಿ ಹಿಂದು ಸಮಾಜದ ರಕ್ಷಣೆಯಾಗಬೇಕಾಗಿದೆ ಹಾಗೆಯೇ ಬೇರೆ, ಬೇರೆ ಧರ್ಮದವರಿಗೂ ಸಮಾನ ಹಕ್ಕು ನೀಡಲಾಗಿದೆ ಎಂದರು.

ಅನ್ಯ ಮತದವರೇ ವಾಸಿಸುವ ಇರಾನ್, ಅಫ಼ಘಾನಿಸ್ಥಾನ್, ಬಾಂಗ್ಲಾ, ಕೆನಡ ಮತ್ತು ಪಾಕಿಸ್ಥಾನ ದೇಶಗಳು ಅರಾಜಕತೆ ಮತ್ತು ಅಶಾಂತೆಯ ದೇಶಗಳಾಗಿದೆ. ಹಿಂದುಗಳು ಮಾತ್ರ ಶಾಂತಿ ಪ್ರಿಯರಾಗಿದ್ದು, ಆದರೇ ರಾಜ್ಯದಲ್ಲಿ ಆಡಾಳಿತ ನಡೆಸುತ್ತಿರುವ ಸರ್ಕಾರದವರೂ ಮಾತ್ರ ಹಿಂದುಗಳಿಂದಲೇ ಅಶಾಂತಿ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದರು.

ಈ ಪ್ರತಿಭಟನೆ ಹತ್ಯೆಯ ವಿರುದ್ಧ ನಡೆದುದ್ದಾಗಿದ್ದು, ಆ ಹೆಣ್ಣು ಮಗಳನ್ನು ಹಲವಾರು ಬಾರಿ ಚುಚ್ಚಿ ಕೊಲ್ಲಲಾಗಿದೆ. ಹಂತಕನಿಗೆ ಅತ್ಯಂತ ಉಗ್ರವಾದ ಶಿಕ್ಷೆಯನ್ನು ಕೊಡಬೇಕು. ಆ ಶಿಕ್ಷೆ ಮುಂದೇಂದೂ ಅನ್ಯಕೋಮಿನವರು ಹಿಂದು ಹೆಣ್ಣು ಮಕ್ಕಳನ್ನು ಕಣ್ಣೇತ್ತಿಯೂ ನೋಡದಂತಿರ ಬೇಕೆಂದು ಆಗ್ರಹಿಸಿದರು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಮುಖ್ಯರಸ್ತೆಯ ಮೂಲಕ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದರು.

ಪುರಸಭೆ ಮುಂಭಾಗದಲ್ಲಿ ಪಾಣಿ ರಾಜಪ್ಪ, ಅಂಡಿಗೆ ಅಶೋಕ ನಾಯಕ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ದೇವರಾಜ್ ಅರಳಳ್ಳಿ ಮಾತನಾಡಿದರು.
ಗುತ್ತಿ ನಾಗರಾಜ್, ವಿರೇಶ ಗೌಡ, ನಂದೀಶ್ ಬಿಳವಾಣಿ ಜಾನಕಪ್ಪ ಒಡೇಯರ್ ಯಲಸಿ, ಚಂದನ್, ಲೋಕೇಶ್ ಗ್ಯಾರೇಜ್, ಸುಧಾಕರ ಭಾವೆ, ಸತೀಶ್ ಬೈದೂರ್, ಸುಧೀರ್ ಪೈ, ರವಿ ಗುಡಿಗಾರ್, ಗಜಾನನ ರಾವ್, ಯೋಗೇಶ ಓಟ್ಟೂರು, ರಾಘು ಆಚಾರ್, ನಾಗರಾಜ್ ಅಂಬಾರಿ, ಶಿವರಾಮ ಹೆಗಡೆ, ರೂಪದರ್ಶಿನಿ, ರೇಣುಕಮ್ಮ ಗೌಳಿ, ಅನಿತಾ ದಾಮ್ಲೆ, ದೇವಕೀ ಆಚಾರ್ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!