ಪೊಲೀಸರ ಚಲನವಲನದ ಮೇಲೆ ಗಮನ ಇಡೋದಕ್ಕೆ ಡ್ರಗ್ ಪೆಡ್ಲ‌ರ್‌ಗಳಿಂದ ಡ್ರೋನ್‌ ಬಳಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶಾದ್ಯಂತ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವಂತೆ ಮಾದಕ ವಸ್ತು ಪೂರೈಕೆ ದಂಧೆಕೋರರು ಡ್ರಗ್ಸ್ ಗಳನ್ನು ಪೂರೈಸಲು ಇತ್ತೀಚೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ, ಗ್ರಾಹಕರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಪೊಲೀಸರ ಚಲನವಲನದ ಮೇಲೆ ನಿಗಾ ಇಡಲು ತಮ್ಮ ವ್ಯಾಪಾರಕ್ಕೆ ಅನುಕೂಲವಾಗಲು ಡ್ರೋನ್‌ಗಳನ್ನು ಬಳಸುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಜಮ್ಮು-ಕಾಶ್ಮೀರದ ಡ್ರಗ್ಸ್ ಪೆಡ್ಲರ್‌ಗಳ ವಶದಲ್ಲಿ ಡ್ರೋನ್ ಪತ್ತೆಯಾಗಿರುವುದು ಇದೇ ಮೊದಲು.

ಕೆಲವು ದಿನಗಳ ಹಿಂದೆ ಶ್ರೀನಗರದ ಡೌನ್‌ಟೌನ್‌ನ ಸಫಾ ಕಡಲ್ ಪ್ರದೇಶದಲ್ಲಿ ಬೈಕ್ ನಲ್ಲಿ ಚಲಿಸುತ್ತಿದ್ದ ಮೂವರನ್ನು ಪೊಲೀಸರು ತಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶ್ರೀನಗರದ ನಿವಾಸಿಗಳಾದ ಏಜಾಜ್ ಅಹ್ಮದ್ ಗನಿ, ಓವೈಸ್ ಅಹ್ಮದ್ ಗೊಜ್ರಿ ಮತ್ತು ಮೀರ್ ರೋಮನ್ ಎಂಬ ಮೂವರನ್ನು ಪೊಲೀಸರು ಕೂಲಂಕಷವಾಗಿ ಶೋಧಿಸಿದ್ದಾರೆ.

ಈ ಪೆಡ್ಲರ್‌ಗಳು ಖರೀದಿದಾರರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡ್ರೋನ್ ಕಣ್ಗಾವಲು ಮೂಲಕ, ಖರೀದಿದಾರರು ಪೊಲೀಸರ ಜೊತೆಗಿಲ್ಲ ಎಂದು ತಿಳಿದುಬಂದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!