ತಡವಾಗಿ ನಿದ್ರೆ ಮಾಡ್ತೀರಾ? ನೀವು ಇತರರಿಗಿಂತ ಹೆಚ್ಚು ಕೆಟ್ಟ ಪದಗಳನ್ನು ಬಳಸುತ್ತೀರಾ? ನಿಮ್ಮ ನೆರೆಹೊರೆಯವರ ದೃಷ್ಟಿಯಲ್ಲಿ ನೀವು ಕೆಟ್ಟವರಾ? ತಡವಾಗಿ ಮಲಗುವ ಮತ್ತು ಕೆಟ್ಟ ಪದಗಳನ್ನು ಬಳಸುವವರ ಬಗ್ಗೆ ಅಧ್ಯಯನವೊಂದು ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದೆ. ಸಂಶೋಧನೆಯ ಪ್ರಕಾರ, ಅಂತಹ ಭಾಷಿಕರು ಹೆಚ್ಚು ಪ್ರಾಮಾಣಿಕ ಹಾಗೂ ಹೆಚ್ಚು ಬುದ್ಧಿವಂತರಾಗಿರುತ್ತಾರಂತೆ.
ಸಂಶೋಧನೆಯ ಪ್ರಕಾರ ರಾತ್ರಿ ತುಂಬಾ ತಡವಾಗಿ ಮಲಗ್ತಾರೋ ಅವರ ಬುದ್ದಿ ಮಟ್ಟ ಹೆಚ್ಚಿರುತ್ತದೆ ಎಂದು ಸಂಶೋಧನೆ ಹೇಳಿದೆ. ಅಂತಹ ಜನರು ವಿಷಯಗಳು ಮತ್ತು ಸನ್ನಿವೇಶಗಳಿಗೆ ಬಹಳ ಬೇಗನೆ ಹೊಂದಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಇಂತಹ ವ್ಯಕ್ತಿಗಳು ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತಾರೆ. ಪ್ರತಿ ಸಮಸ್ಯೆಗೆ ಸಕಾರಾತ್ಮಕ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಅವರು ತಪ್ಪುಗಳಿಂದ ಹೆಚ್ಚು ಕಲಿಯುತ್ತಾರೆ ಎಂದು ಸಂಶೋಧನೆ ತಿಳಿಸಿದೆ.