ಒಪ್ಪಿಗೆ ಇಲ್ಲದೇ PayCM ಪೋಸ್ಟರ್ ಗಳಲ್ಲಿ ಫೋಟೋ ಬಳಕೆ: ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರಕಾರ ವಿರುದ್ಧ ‘ಪೇಸಿಎಂ'(‘PayCM’) ಪೋಸ್ಟರ್‌ ಅಭಿಯಾನ ನಡೆಸಿ ರಾಜ್ಯ ಕಾಂಗ್ರೆಸ್ ಪೇಚಿಗೆ ಸಿಲುಕಿಗೊಂಡಿದೆ. ಇದೀಗ ಪೋಸ್ಟರ್‌ಗಳಿಗೆ ತಮ್ಮ ಫೋಟೋವನ್ನು . ಒಪ್ಪಿಗೆಯಿಲ್ಲದೆ ಬಳಸಿದ್ದಾರೆ ಎಂದು ಬೆಂಗಳೂರು ಮೂಲದ ನಟ ಅಖಿಲ್ ಅಯ್ಯರ್ ತಿಳಿಸಿದ್ದಾರೆ .

ಕಾಂಗ್ರೆಸ್ ನಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರ ಚಿತ್ರವಿರುವ ‘ಪೇಸಿಎಂ’ ಪೋಸ್ಟರ್‌ ಗಳನ್ನು ಹಾಕಲಾಗಿದೆ.ಶೇಕಡಾ 40 ರಷ್ಟು ಕಮಿಷನ್ ರೂಢಿಯಾಗಿದೆ ಎನ್ನುವುದನ್ನು ತೋರಿಸಲು “40% ಸರ್ಕಾರ” ಪೋಸ್ಟರ್‌ ಗಳನ್ನು ವಿನ್ಯಾಸಗೊಳಿಸಲಾಗಿದೆ. ಒಂದು ಪೋಸ್ಟರ್‌ನಲ್ಲಿ ಅಖಿಲ್ ಅಯ್ಯರ್ ಅವರ ಫೋಟೋವನ್ನು ಬಳಸಲಾಗಿದೆ. 40% ಸರ್ಕಾರ 54,000 ಕ್ಕೂ ಹೆಚ್ಚು ಯುವಕರ ವೃತ್ತಿಜೀವನವನ್ನು ಕಸಿದುಕೊಂಡಿದೆ ಎಂದು ಪೋಸ್ಟರ್ ನಲ್ಲಿ ಆರೋಪಿಸಲಾಗಿದೆ.

ಇದೀಗ ಟ್ವಿಟರ್‌ ನಲ್ಲಿ ನಟ ಅಖಿಲ್ ಅಯ್ಯರ್ ಅವರು ತಮ್ಮ ಚಿತ್ರದ “ಅಕ್ರಮ” ಬಳಕೆಯನ್ನು ಫ್ಲ್ಯಾಗ್ ಮಾಡಿದ್ದಾರೆ. ಮತ್ತು ನನ್ನ ಫೋಟೋವನ್ನು ಕಾನೂನುಬಾಹಿರವಾಗಿ ನನ್ನ ಒಪ್ಪಿಗೆಯಿಲ್ಲದೆ ಕಾಂಗ್ರೆಸ್ ಪ್ರಚಾರಕ್ಕಾಗಿ ಬಳಸುತ್ತಿರುವುದನ್ನು ನೋಡಿ ನನಗೆ ದಿಗಿಲಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಈ ಪೋಸ್ಟ್‌ ನಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿದ ಅವರು ಈ ವಿಷಯವನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!