ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಸೈನಿಕರಿಗೆ ಅತೀ ಶ್ರೇಷ್ಠ ಸ್ಥಾನಮಾನವಿದೆ. ಯಾರಿಗೆ ಅತಿ ಹೆಚ್ಚು ಗೌರವಿಸಲ್ಪಡುವ ವೃತ್ತಿಗಳೆಂದರೆ ಅದು ಸೈನಿಕರು.
ಆದ್ರೆ ಸೈನಿಕರಿಗೆ ಅನ್ಯಾಯ ಅಥವಾ ಅವಮಾನ ಆದಲ್ಲಿ ಭಾರತೀಯರು ಸಹಿಸುವುದಿಲ್ಲ. ಇದೀಗ ಸಿನಿಮಾ ನಿರ್ಮಾಪಕಿಯೊಬ್ಬರು, ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂಬ ಆರೋಪ ಹೊತ್ತಿದ್ದು, ನಿರ್ಮಾಪಕಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾರತೀಯ ಟಿವಿ ಲೋಕದ ಬಾದ್ಶಾ, ಕಿಂಗ್ ಮೇಕರ್ ಎಂದೇ ಕರೆಯಲಾಗುವ ಏಕ್ತಾ ಕಪೂರ್ ಅವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ಏಕ್ತಾ ಕಪೂರ್, ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಹಲವಾರು ಟಿವಿ ಧಾರಾವಾಹಿಗಳ ನಿರ್ಮಾಪಕಿ ಆಗಿರುವ ಏಕ್ತಾ ಕಪೂರ್ ಆಲ್ಟ್ ಬಾಲಾಜಿ ಹೆಸರಿನ ಒಟಿಟಿಯನ್ನೂ ಸಹ ನಡೆಸುತ್ತಿದ್ದು, ಈ ಆಲ್ಟ್ ಬಾಲಾಜಿ ಒಟಿಟಿಯಲ್ಲಿ ಸಾಫ್ಟ್ ಪಾರ್ನ್ ರೀತಿಯ ವೆಬ್ ಸರಣಿ, ಸಿನಿಮಾಗಳನ್ನು ಮಾತ್ರವೇ ಪ್ರಸಾರ ಮಾಡಲಾಗುತ್ತದೆ.
ಇಂಥಹುದೇ ಸಾಫ್ಟ್ ಪಾರ್ನ್ ವೆಬ್ ಸರಣಿಯೊಂದರಲ್ಲಿ ಸೈನಿಕರ ಪಾತ್ರವನ್ನು ಬಳಸಿಕೊಳ್ಳಲಾಗಿದ್ದು, ಸೈನಿಕ ತನ್ನ ಸಮವಸ್ತ್ರದಲ್ಲಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಈ ವಿಷಯವಾಗಿ ಯೂಟ್ಯೂಬರ್ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಪೊಲೀಸ್ ಠಾಣೆಗೆ ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ನಮೂದು ಮಾಡಿಕೊಂಡಿದ್ದರು. ಆದರೆ ವಿಚಾರಣೆ ನಡೆಸಿರಲಿಲ್ಲ. ಇದೀಗ ನ್ಯಾಯಾಲಯವು, ಪೊಲೀಸರಿಗೆ ಸೂಚನೆ ನೀಡಿದ್ದು, ಏಕ್ತಾ ಕಪೂರ್ ವಿಚಾರಣೆ ನಡೆಸಿ, ಮೇ 9ರ ಒಳಗಾಗಿ ವರದಿ ನೀಡುವಂತೆ ಸೂಚಿಸಿದೆ.
ಯೂಟ್ಯೂಬರ್ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಏಕ್ತಾ ಕಪೂರ್ ವಿರುದ್ಧ ದೂರು ನೀಡಿ ಬಹಳ ಸಮಯವೇ ಆಗಿದೆ. ಸೆಕ್ಷನ್ 202 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಏಕ್ತಾ ಕಪೂರ್ ವಿಚಾರಣೆ ನಡೆಸಿರಲಿಲ್ಲ. ಏಕ್ತಾ ಕಪೂರ್ ಮಾತ್ರವೇ ಅಲ್ಲದೆ, ಆಲ್ಟ್ ಬಾಲಾಜಿಯ ಇತರೆ ಸಹ ಮಾಲೀಕರು, ಆ ವೆಬ್ ಸರಣಿಯ ನಿರ್ದೇಶಕರು ಇನ್ನೂ ಕೆಲವರ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಿಸಿರುವ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಸಹ ಸಾಮಾನ್ಯ ವ್ಯಕ್ತಿಯೇನಲ್ಲ. ಕಾರಿನಲ್ಲಿ ಕೂತು ಕೆಟ್ಟ ಕೆಟ್ಟದಾಗಿ ಜನರನ್ನು, ಸೆಲೆಬ್ರಿಟಿಗಳನ್ನು ಬೈಯ್ಯುವ ಮೂಲಕ ಜನಪ್ರಿಯ ಆಗಿದ್ದಾರೆ ಈ ವ್ಯಕ್ತಿ. ಇದೀಗ ಇದೇ ವ್ಯಕ್ತಿಯೇ ಏಕ್ತಾ ಕಪೂರ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.