Saturday, April 1, 2023

Latest Posts

SUMMER EFFECT| ಬಿಸಿಲಿನಲ್ಲಿ ಹೆಚ್ಚು ಫೋನ್ ಬಳಸುತ್ತಿದ್ದೀರಾ..ಎಷ್ಟು ಅಪಾಯಕಾರಿ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ಗಳ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಮೊಬೈಲ್ ಎಲ್ಲರ ಬದುಕಿನ ಭಾಗವಾಗಿಬಿಟ್ಟಿದೆ. ಕೆಲವರು ಫೋನ್ ಇಲ್ಲದೆ ಹೊರಗೆ ಕಾಲಿಡುವುದಿಲ್ಲ. ಬಸ್ಸಿನಲ್ಲಿರಲಿ, ಬೈಕ್‌ನಲ್ಲಿರಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೂ ಫೋನ್ ನೋಡುವುದು ಕಾಮನ್ ಆಗಿಬಿಟ್ಟಿದೆ.

ಅದರಲ್ಲೂ ಬಿಸಿಲಿನಲ್ಲಿ ಫೋನ್ ಬಳಸುವುದು ಕಣ್ಣಿಗೆ ದೊಡ್ಡ ಅಪಾಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಬಿಸಿಲಿನಲ್ಲಿ ಫೋನ್ ನೋಡುವುದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಿ, ದೃಷ್ಟಿ ಕಳೆದುಕೊಳ್ಳಬಹುದು ಎಂದು ಅನೇಕ ಅಧ್ಯಯನಗಳು ತೋರಿಸಿವೆ.

ಬಿಸಿಲಿನಲ್ಲಿ ಫೋನ್ ಬಳಸುವಾಗ ಸೂರ್ಯನ ಕಿರಣಗಳು ನೇರವಾಗಿ ಫೋನ್ ಪರದೆಯ ಮೇಲೆ ಬೀಳುತ್ತವೆ. ಆ ಸಮಯದಲ್ಲಿ ಸೂರ್ಯನ ಕಿರಣಗಳು ಕಣ್ಣಿನ ರೆಟಿನಾದಲ್ಲಿ ಪ್ರತಿಫಲಿಸುತ್ತದೆ. ಇದು ರೆಟಿನಾದ ಹಿಂದಿನ ಮ್ಯಾಕುಲಾವನ್ನು ಹಾನಿಗೊಳಿಸುತ್ತದೆ. ಇದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇಲ್ಲದಿದ್ದರೂ ಆಗಾಗ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಆದಷ್ಟು ಬಿಸಿಲಿನಲ್ಲಿ ಫೋನ್ ಬಳಸದಿರುವುದು ಒಳ್ಳೆಯದು.

ತುರ್ತುಪರಿಸ್ಥಿತಿಯಾದರೆ ಸನ್ ಗ್ಲಾಸ್ ಹಾಕಿಕೊಂಡು ಫೋನ್ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ಪರಿಣಾಮ ತಗ್ಗಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!