VIRAL VIDEO | ಉಸ್ಸಪ್ಪಾ ಕೆಲಸ ಮುಗೀತು.. ನ್ಯೂಸ್ ಆಂಕರ್ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ನ್ಯೂಸ್ ಓದುವವರು ಎಂದರೆ ಘನತೆ, ಗಾಂಭೀರ್ಯ ಹೆಚ್ಚು, ಹಿಂದಿನ ಕಾಲದಲ್ಲಿ ನ್ಯೂಸ್ ಓದುವವರ ನಗುವನ್ನು ಕಾಣೋದಕ್ಕೆ ಅಸಾಧ್ಯವಾಗಿತ್ತು. ಎಂಥ ಪ್ರೊಫೆಶನಲ್ ಆಗಿದ್ದರೂ ಕೆಲವೊಮ್ಮೆ ಎಡವಟ್ಟು ಆಗೋದು ಮಾಮೂಲಿ.

ಪ್ರತಿಷ್ಠಿತ ಚಾನೆಲ್‌ವೊಂದರ ಆಂಕರ್ ಮಾಡಿದ ಎಡವಟ್ಟಿನ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಆಂಕರ್ ಒಬ್ಬರು ತಮ್ಮ ನ್ಯೂಸ್ ಓದಿ ಮುಗಿಸಿದ್ದಾರೆ. ಮುಗಿದ ನಂತರ ಉಸ್ಸಪ್ಪಾ ಕೆಲಸ ಮುಗೀತು ಎನ್ನುವಂತೆ ತಮ್ಮ ಕೈಗಳನ್ನು ಮೇಲೆತ್ತಿ ಮೈಮುರಿದಿದ್ದಾರೆ, ಆಗ ಕ್ಯಾಮೆರಾ ಇನ್ನೂ ರೋಲಿಂಗ್‌ನಲ್ಲಿಯೇ ಇದೆ ಎಂದು ತಿಳಿದು ತಬ್ಬಿಬ್ಬಾಗಿದ್ದಾರೆ.

ಆದರೆ ಕ್ಷಣವೂ ವೇಸ್ಟ್ ಮಾಡದೇ ಏನೂ ಆಗಿಲ್ಲದವರಂತೆ ಆಕೆ ಸುಮ್ಮನೆ ಕುಳಿತಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ನಗೆ ತರಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!