BREAKING| ಗೋಲ್ಡನ್ ಟೆಂಪಲ್ ಬಳಿ ಮತ್ತೊಂದು ಸ್ಫೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಮೇ 6 ರಂದು ಸ್ಫೋಟ ಸಂಭವಿಸಿದ ಸ್ಥಳದಲ್ಲೇ ಮತ್ತೊಮ್ಮೆ ಸ್ಪೋಟವಾಗಿದೆ. ಸೋಮವಾರ ಬೆಳಿಗ್ಗೆ ನಡೆದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಘಟನೆ ನಡೆದಿದೆ.

ಸ್ಫೋಟದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಮತ್ತು ಘಟನೆಯ ಕಾರಣವನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧ್ವಂಸಕ ಕೃತ್ಯ, ಬಾಂಬ್ ಸ್ಕ್ವಾಡ್ ಮತ್ತು ಎಫ್‌ಎಸ್‌ಎಲ್ ತಂಡಗಳು ಕರೆಸಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ  ಅಮೃತಸರ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಮೆಹ್ತಾಬ್ ಸಿಂಗ್ ತಿಳಿಸಿದ್ದಾರೆ.

ಸ್ಫೋಟದಲ್ಲಿ ಒಬ್ಬ ವ್ಯಕ್ತಿಯ ಕಾಲಿಗೆ ಸಣ್ಣಪುಟ್ಟ ಗಾಯವಾಗಿದೆ ಮತ್ತು ಹತ್ತಿರದ ಕೆಲವು ಕಟ್ಟಡಗಳ ಗಾಜಿನ ಮುಂಭಾಗಗಳು ಹಾನಿಗೊಳಗಾಗಿವೆ. ದೊಡ್ಡ ಸ್ಫೋಟದ ಸದ್ದು ಕೇಳಿದ್ದು, ದಟ್ಟ ಹೊಗೆ ಕಾಣಿಸಿಕೊಂಡಿದೆ’ ಎಂದು ಸ್ಥಳೀಯರೊಬ್ಬರು ಮಾಹಿತಿ ಕೊಟ್ಟಿದ್ದಾರೆ.

ಮೇ 6 ರಂದು, ಶನಿವಾರ ರಾತ್ರಿ 11:15 ರ ಸುಮಾರಿಗೆ ಗೋಲ್ಡನ್ ಟೆಂಪಲ್ ಬಳಿಯ ಅದೇ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಅಮೃತಸರ ಎಡಿಸಿಪಿ ಮೆಹ್ತಾಬ್ ಸಿಂಗ್ ಅವರು ಶನಿವಾರದ ಸ್ಫೋಟ ಮತ್ತು ಇಂದಿನ ಸ್ಫೋಟದ ತೀವ್ರತೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!