Friday, December 8, 2023

Latest Posts

ವೈದ್ಯ ಲೋಕದ ಅಚ್ಚರಿ: ಮಹಿಳೆಗೆ ಎರಡು ಗರ್ಭಧಾರಣೆ, ಎರಡು ಭ್ರೂಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯ ಹೊಟ್ಟೆಯಲ್ಲಿ ಹಿಂದೆಂದೂ ಕಾಣದ, ಕೇಳದ ಎರಡು ಗರ್ಭಧಾರಣೆಯಾಗಿದೆ. ಮಹಿಳೆಯಲ್ಲಿ ಹೊಟ್ಟೆಯಲ್ಲಿ ಎರಡು ಗರ್ಭ, ಒಂದೇ ಬಾರಿಗೆ ಎರಡು ಶಿಶುಗಳು ಬೆಳೆಯುತ್ತಿರುವುದನ್ನು ಕಂಡು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎರಡು ಗರ್ಭದಲ್ಲಿ ಎರಡು ಶಿಶುಗಳು ಬೆಳೆಯುತ್ತಿರುವುದು ತೀರಾ ಅಪರೂಪ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಮಹಿಳೆಯ ಹೆರಿಗೆ ಅಪಾಯಕಾರಿಯಾಗಲಿದೆ ಎನ್ನುತ್ತಿದ್ದಾರೆ ವೈದ್ಯರು. ಈ ಅಪರೂಪದ ಪ್ರಕರಣ ಬೆಳಕಿಗೆ ಬಂದಿರುವುದು ಅಮೆರಿಕದಲ್ಲಿ.

ದಕ್ಷಿಣ ಅಮೆರಿಕದ ಅಲಬಾಮಾ ರಾಜ್ಯದಲ್ಲಿ ವಾಸಿಸುತ್ತಿರುವ ದಂಪತಿ ಕೆಲ್ಸಿ ಹ್ಯಾಚರ್ ಮತ್ತು ಕ್ಯಾಲೆಬ್ ಅವರಿಗೆ ಮೂವರು ಮಕ್ಕಳಿದ್ದಾರೆ. ಕೆಲ್ಸಿ ಹ್ಯಾಚರ್ ಇತ್ತೀಚೆಗೆ ಮತ್ತೆ ಗರ್ಭಿಣಿಯಾಗಿದ್ದು, ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದರು. ಈ ಸಂದರ್ಭದಲ್ಲಿ ಮಹಿಳೆ ಎರಡು ಗರ್ಭಾಶಯಗಳನ್ನು ಹೊಂದಿದ್ದಾರೆಂದು ಗೊತ್ತಾಗಿದೆ. ಅಷ್ಟೇ ಅಲ್ಲ.. ಆ ಎರಡೂ ಗರ್ಭದಲ್ಲಿ ಏಕಕಾಲಕ್ಕೆ ಎರಡು ಭ್ರೂಣಗಳು ಬೆಳೆಯುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಗರ್ಭಾಶಯದಲ್ಲಿ ಎರಡು ಶಿಶುಗಳಿದ್ದರೆ ಅವಳಿ ಎಂದು ಕರೆಯುತ್ತಾರೆ ಆದರೆ ಎರಡು ಗರ್ಭಾಶಯದಲ್ಲಿ ಎರಡು ಶಿಶುಗಳು ವಿಭಿನ್ನವಾಗಿರುವುದನ್ನು ಕಂಡು ವೈದ್ಯರೂ ಆಶ್ಚರ್ಯಚಕಿತರಾದರು. ಭ್ರೂಣಗಳು ಬೆಳೆಯುವಾಗ ಜಾಗರೂಕರಾಗಿರಬೇಕು. ವೈದ್ಯಕೀಯವಾಗಿ ನೋಡುವುದಾದರೆ, ಇಂತಹ ಪ್ರಕರಣಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಕೆಲವೊಮ್ಮೆ ಹೆರಿಗೆಯ ಸಮಯದಲ್ಲಿ ಪ್ರಾಣ ಹೋಗುವ ಸಂಭವವೂ ಹೆಚ್ಚು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!