ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನುಷ್ಯರನ್ನು ಹೋಲುವ ಮನುಷ್ಯರು ಇದ್ದಾರೆ ಎಂದು ನಾವು ಅನೇಕ ಬಾರಿ ಕೇಳಿದ್ದೇವೆ…ನೋಡಿರುತ್ತೇವೆ ಕೂಡ. ಉದ್ಯಮಿ ಆನಂದ್ ಮಹೀಂದ್ರಾ ಅವರು ಸಹ ತಮ್ಮಂತೆಯೇ ಕಾಣುವ ವ್ಯಕ್ತಿಯ ಫೋಟೋವನ್ನು ನೋಡಿ ಕುತೂಹಲಕಾರಿ ಟ್ವೀಟ್ ಮಾಡಿದ್ದು, ಆ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.
@pjdaddyofficial ಎಂಬ ಟ್ವಿಟರ್ ಬಳಕೆದಾರರು ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿ, “ಈತ ಪುಣೆಯ ನನ್ನ ಸಹೋದ್ಯೋಗಿ, ನೋಡಲು ಥೇಟ್ ಆನಂದ್ ಮಹೀಂದ್ರಾ ರೀತಿಯೇ ಕಾಣುತ್ತಾರೆ” ಎಂದು ಶೀರ್ಷಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹಿಂದ್ರಾ..‘ನಮ್ಮ ಬಾಲ್ಯದಲ್ಲಿ ಯಾವುದೋ ಜಾತ್ರೆಯ ವೇಳೆ ಕಳೆದುಹೋಗಿದ್ದೆವು’ ಎಂಬ ಶೀರ್ಷಿಕೆ ಕೊಟ್ಟು ಮರುಟ್ವೀಟ್ ಮಾಡಿದ್ದಾರೆ. ಮಹೀಂದ್ರ ನೀಡಿರುವ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆನಂದ್ ಮಹೀಂದ್ರಾ ಅವರ ಪೋಸ್ಟ್‌ಗೆ ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳು ಮತ್ತು 10,000 ಕ್ಕೂ ಹೆಚ್ಚು ಲೈಕ್‌ಗಳು.