ಉತ್ತರ ಪ್ರದೇಶ ಉಪ ಚುನಾವಣೆ: ಅಜಂ ಖಾನ್‌ ಭದ್ರಕೋಟೆಯಲ್ಲಿ ಅರಳಿದ ಕಮಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇತ್ತ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಹೊರಬರುತ್ತಿದ್ದರೆ ಅತ್ತ ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭೆ ಕ್ಷೇತ್ರ ಸೇರಿ ಇತರೆ 6 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆಯೂ ನಡೆಯುತ್ತಿತ್ತು.

ಈ ಪೈಕಿ, ಉತ್ತರ ಪ್ರದೇಶದ ರಾಮ್‌ಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಇದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಹಾಗೂ ಅವರ ಕುಟುಂಬವೇ ಪ್ರಾಬಲ್ಯ ಸಾಧಿಸಿದ್ದ ಕ್ಷೇತ್ರವಾಗಿತ್ತು. ಇದೀಗ ಅಜಂ ಖಾನ್‌ ಅವರ ಭದ್ರಕೋಟೆಯಲ್ಲಿ ಕಮಲರಲಿದೆ.

ರಾಮ್‌ಪುರ ಸದರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಶಾಸಕ ಶಿವ ಬಹದ್ದೂರ್ ಸಕ್ಸೇನಾ ಅವರ ಪುತ್ರ ಆಕಾಶ್ ಸಕ್ಸೇನಾ ಅವರನ್ನು ಅಜಂ ಖಾನ್ ಅವರ ಆಪ್ತ ಆಸಿಂ ರಾಜಾ ವಿರುದ್ಧ ಕಣಕ್ಕಿಳಿಸಿತ್ತು. ಆಕಾಶ್ ಸಕ್ಸೇನಾ ಅವರು 62 ಪ್ರತಿಶತದಷ್ಟು ಮತಗಳನ್ನು ಗಳಿಸಿದ್ದರೆ, ಆಸಿಂ ರಾಜಾ ಅವರು 36.16 ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!