ಮತ್ತೆ ಟೀಂ ಇಂಡಿಯಾ ಬಳಗಕ್ಕೆ ಜಸ್ಪ್ರೀತ್ ಬುಮ್ರಾ ಎಂಟ್ರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಇಂಜುರಿಯಿಂದಾಗಿ ತಂಡದಿಂದ ದೂರಉಳಿದಿದ್ದು, ಹೀಗಾಗಿ ಬುಮ್ರಾ ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಬಹುದಿನಗಳ ಪ್ರಶ್ನೆ ಕಾಡಿದೆ .

ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಬುಮ್ರಾ ಮುಂದಿನ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆಯಲ್ಲಿರುವ ತವರು ಸರಣಿಯಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಯಾರ್ಕರ್ ಕಿಂಗ್ ಬುಮ್ರಾ ಅನುಪಸ್ಥಿತಿ ತಂಡವನ್ನು ಕಾಡುತ್ತಿದ್ದು, ಕಳೆದ ಏಷ್ಯಾಕಪ್​ನಿಂದಲೂ ಇಂಜುರಿಯಿಂದ ಬಳಲುತ್ತಿರುವ ಬುಮ್ರಾ ಇದುವರೆಗೂ ತಂಡ ಸೇರಿಕೊಂಡಿಲ್ಲ. ಟಿ20 ವಿಶ್ವಕಪ್​ನಲ್ಲೂ ಟೀಂ ಇಂಡಿಯಾಕ್ಕೆ ಬೌಲಿಂಗ್ ಸಮಸ್ಯೆ ಕಾದಿತ್ತು. ಹೀಗಾಗಿ ಬುಮ್ರಾ ಯಾವಾಗ ತಂಡಕ್ಕೆ ಮರಳುತ್ತಾರೆ ಎಂದು ಎಲ್ಲರು ಕಾಯುತ್ತಿದ್ದಾರೆ.

ಇದೀಗ ತವರಿನ ಅಂಗಳದ ಸರಣಿಯಲ್ಲಿ ಬುಮ್ರಾ ಆಡುವುದನ್ನು ನೋಡಬಹುದು ಎಂಬ ನಿರೀಕ್ಷೆ ಇದೆ. ಇದಕ್ಕೆ ಪೂರಕವೆಂಬಂತೆ ಮಂಡಳಿಯ ಮೂಲಗಳಿಂದ ಹೊರಬಿದ್ದಿರುವ ಕೆಲವು ಮಾಹಿತಿಗಳು ಕೂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿವೆ.

ಮುಂದಿನ ವರ್ಷ ಜನವರಿಯಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಆಡುವ ಬಗ್ಗೆ ನಿರ್ಧರಿಸಬಹುದು ಎಂದು ಮಾಧ್ಯಮ ವರದಿ ಬಹಿರಂಗಪಡಿಸಿದೆ. ವೈದ್ಯಕೀಯ ತಂಡವು ಬುಮ್ರಾ ಅವರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡಿಸಲಿದೆ. ಆ ಬಳಿಕ ಜನವರಿಯಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಬುಮ್ರಾರನ್ನು ಆಡಿಸಬೇಕೆ ಅಥವಾ ಬೇಡವೇ ಎಂಬುದುನ್ನು ಆಯ್ಕೆದಾರರು ನಿರ್ಧರಿಸುತ್ತಾರೆ. ಇದಕ್ಕೆ ಪೂರಕವೆಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಬುಮ್ರಾ, ತಾನು ತಂಡ ಸೇರಲು ಮಾಡುತ್ತಿರುವ ಕಸರತ್ತನ್ನು ಜನರ ಮುಂದಿಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!