ಉತ್ತರಪ್ರದೇಶ ಚುನಾವಣಾ ಫಲಿತಾಂಶ: 278 ಸ್ಥಾನಗಳಿಂದ ಬಿಜೆಪಿಗೆ ಭಾರೀ ಮುನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಚರಾಜ್ಯಗಳಲ್ಲಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಆರಂಭದಲ್ಲೇ ಮುನ್ನಡೆ ಪಡೆದುಕೊಂಡಿದೆ.
ಉತ್ತರ ಪ್ರದೇಶದಲ್ಲಿ 403 ಸ್ಥಾನಗಳಿಗೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 278, ಎಸ್‌ ಪಿ 105, ಬಿಎಸ್‌ ಪಿ 7, ಕಾಂಗ್ರೆಸ್‌ 3 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ.
ಉತ್ತರ ಪ್ರದೇಶದಲ್ಲಿ ನಡೆದ 7 ಹಂತಗಳ ಚುನಾವಣೆ ನಡೆದಿದ್ದು, ಬಹುಮತ ಗಳಿಸಲು ಪಕ್ಷಗಳು 202 ಮ್ಯಾಜಿಕ್‌ ನಂಬರ್ ಆಗಿದೆ. ಆರಂಭಿಕ ಮತ ಎಣಿಕೆ ಮಾಹಿತಿ ಪ್ರಕಾರ ಗೋವಾ, ಉತ್ತರಾಖಂಡ್​ ರಾಜ್ಯಗಳಲ್ಲಿ ಕಾಂಗ್ರೆಸ್ 19 ಮತ್ತು ಮಣಿಪುರದಲ್ಲಿ ಬಿಜೆಪಿ 15 ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುನ್ನಡೆ ದಾಖಲಿಸಿದೆ.
ಉತ್ತರ ಪ್ರದೇಶದಲ್ಲಿ 403, ಪಂಜಾಬ್​ 117, ಉತ್ತರಾಖಂಡ್ 70, ಮಣಿಪುರ 60 ಹಾಗೂ ಗೋವಾದ 40 ಸ್ಥಾನಗಳಲ್ಲಿ ಮತದಾನವಾಗಿದ್ದು, ಇಂದು ಎಲ್ಲ ರಾಜ್ಯಗಳ ಫಲಿತಾಂಶ ಬಹಿರಂಗಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!