ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ: ಯಾವ ರಾಜ್ಯದ ಗದ್ದುಗೆ ಯಾವ ಪಕ್ಷದ ಪಾಲು?

ಕೊಸದಿಗಂತ ಡಿಜಿಟಲ್‌ ಡೆಸ್ಕ್‌:
ಕೆಲವೇ ಗಂಟೆಗಳಲ್ಲಿ ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಇದಾಗಲೇ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ಇಡೀ ರಾಷ್ಟ್ರದ ಕಣ್ಣು ಪಂಚರಾಜ್ಯಗಳ ರಿಸೆಲ್ಟ್ ಮೇಲೆ ನೆಟ್ಟಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಿದೆ.ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಉತ್ತರ ಪ್ರದೇಶ ಮತ್ತು ಮಣಿಪುರಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದ್ದು, ಉತ್ತರಾಖಂಡ್​​ನಲ್ಲಿ ಕಾಂಗ್ರೆಸ್​ ಗದ್ದುಗೆಗೇರಲಿದೆ ಎನ್ನಲಾಗುತ್ತಿದೆ. ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ ಸರ್ಕಾರ ಬಲಿದೆ ಎಂಬ ಸಮೀಕ್ಷೆ ಆಪ್​ ವಲಯದಲ್ಲಿ ಸಂಭ್ರಮ ಮೂಡಿಸಿದೆ. ಉತ್ತರಾಖಂಡ್​, ಉತ್ತರ ಪ್ರದೇಶ, ಉತ್ತರಾಖಂಡ್​ ಮತ್ತು ಮಣಿಪುರಗಳಲ್ಲಿ =ತಮ್ಗೋಮದೇ ಗೆಲುವು ಎಂಬ ವಿಶ್ವಾವಸದಲ್ಲಿ ಬಿಜೆಪಿ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!