Sunday, December 4, 2022

Latest Posts

ಪೊಲೀಸ್ ಠಾಣೆಯಿಂದಲೇ ಬಂದೂಕು, ಸಮವಸ್ತ್ರ ಕದ್ದೊಯ್ದ ಕಳ್ಳರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯ ಜನರ ಮನೆಗಳಲ್ಲಿ ಕಳ್ಳತನ ನಡೆದರೆ ಪೊಲೀಸರಿಗೆ ದೂರು ನೀಡುತ್ತೇವೆ. ಆದರೆ, ಪೊಲೀಸ್ ಠಾಣೆಯಲ್ಲಿ ದರೋಡೆ ನಡೆದರೆ? ಪೋಲೀಸರ ಪ್ರತಿಷ್ಠೆ ಏನಾಗಬೇಡ?ಉತ್ತರ ಪ್ರದೇಶದಲ್ಲಿ ನಡೆದಿದ್ದು ಅದೇ. ಕಳ್ಳರು ಪೊಲೀಸ್‌ ಠಾಣೆಗೆ ನುಗ್ಗಿ ಸಮವಸ್ತ್ರ, ಬಂದೂಕು ಕದ್ದಿದ್ದಲ್ಲದೆ ಹಲವು ವಸ್ತುಗಳನ್ನು ಮುರಿದು ಹಾಕಿ ಬೆಂಕಿ ಹಚ್ಚಿದ್ದಾರೆ. ಘಟನೆಯಿಂದ ಪೊಲೀಸರೇ ಬೆಚ್ಚಿಬಿದ್ದಿದ್ದು, ಪೊಲೀಸ್ ಠಾಣೆಯಲ್ಲೇ ಕದಿಯಲು ಎಷ್ಟು ಧೈರ್ಯ ಎಂದು ಕಳ್ಳರಿಗೆ ಬಿಸಿ ಮುಟ್ಟಿಸಲು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣ ಭೇದಿಸಲು ಉನ್ನತಾಧಿಕಾರಿಗಳು ಫೀಲ್ಡಿಗಿಳಿದಿದ್ದರು.

ಪೊಲೀಸರ ಕೈಯಲ್ಲಿ ಇರಬೇಕಾಗಿದ್ದ ಬಂದೂಕು ಮಾತ್ರವಲ್ಲದೆ ಪೊಲೀಸ್ ಸಮವಸ್ತ್ರ, ಹತ್ತು ಕಾಟ್ರಿಡ್ಜ್‌ಗಳನ್ನೂ ಕಳ್ಳರು ದೋಚಿದ್ದಾರೆ. ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ ಈ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸ್ಥಳೀಯವಾಗಿ ತೀವ್ರವಾಗಿದೆ ಇದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಬುಧವಾರ (ನವೆಂಬರ್ 9, 2022) ರಾತ್ರಿ, ಕಾನ್ಪುರದ ನ್ಯೂ ಆಜಾದ್ ನಗರದ ಬಿದ್ನು ಔಟ್‌ಪೋಸ್ಟ್‌ನಲ್ಲಿ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ. ಔಟ್ ಪೋಸ್ಟ್ ಇನ್ ಚಾರ್ಜ್ ಸುಧಾಕರ ಪಾಂಡೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿದ್ನು ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡ ಕಳ್ಳರು ಗಾಢ ನಿದ್ದೆಯಲ್ಲಿದ್ದ ಸುಧಾಕರ್ ಪಾಂಡೆ ಪಕ್ಕದಲ್ಲಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾ ಎಸ್ಪಿ ಸುಧಾರಕ ಪಾಂಡೆ ಅವರನ್ನು ಅಮಾನತುಗೊಳಿಸಿದರು. ಸರ್ಕಾರಿ ಬಂದೂಕು, ಸಮವಸ್ತ್ರ ಮತ್ತು ಹತ್ತು ಕಾಟ್ರಿಡ್ಜ್‌ಗಳು ನಾಪತ್ತೆಯಾಗಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ. ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!