ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶದ ಬುಲಂದ್‌ಶಹರ್ ಜೈಲಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ವು ಪಂಚತಾರಾ (5 ಸ್ಟಾರ್) ರೇಟಿಂಗ್ ಮತ್ತು ‘ಈಟ್ ರೈಟ್ ಕ್ಯಾಂಪಸ್’ ಎಂಬ ಟ್ಯಾಗ್ ನೀಡಿದೆ.
ಎಫ್‌ಎಸ್‌ಎಸ್‌ಎಐ ತಂಡವು ಜೈಲಿನ ಅಡುಗೆಮನೆಯ ಆಹಾರದ ಗುಣಮಟ್ಟ, ಆಹಾರ ಸಂಗ್ರಹಣೆ ಮತ್ತು ನೈರ್ಮಲ್ಯದ ಅಚ್ಚುಗಟ್ಟುತನವನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ಬುಲಂದ್‌ಶಹರ್ ಜೈಲಿಗೆ ಪಂಚತಾರಾ ರೇಟಿಂಗ್ ನೀಡಿದೆ. ಇಲ್ಲಿನ ಜೈಲಿನ ಶುಚಿತ್ವದ ಕ್ರಮಗಳು ಅತ್ಯುತ್ತಮವಾಗಿದೆ ಎಂದು ಅದು ಹೇಳಿದೆ.
ಜೈಲು ಅಧಿಕಾರಿಗಳು ಮತ್ತು ಕೈದಿಗಳು ಜೈಲಿನ ಸೌಂದರ್ಯೀಕರಣ, ಸ್ವಚ್ಛತೆ ಮತ್ತು ಆಹಾರ ಸುರಕ್ಷತೆಗಾಗಿ ವ್ಯಾಪಕವಾಗಿ ಶ್ರಮಿಸುತ್ತಿದ್ದಾರೆ. ಸಿಬ್ಬಂದಿ ಆಹಾರ ತಯಾರಿಸಲು ಕ್ಲೀನ್ ಎಪ್ರಾನ್‌ಗಳು, ಗ್ಲೌಸ್ ಗಳು ಮತ್ತು ಕ್ಯಾಪ್‌ಗಳನ್ನು ಬಳಸುತ್ತಾರೆ. ಈ ಮೂಲಕ ಅವರು ಶುಚಿತ್ವದ ಎಲ್ಲಾ ಮಾನದಂಡಗಳನ್ನು ಪಾಲಿಸುತ್ತಿದ್ದಾರೆ ಎಂದು ಅದು ಹೇಳಿದೆ. ಬುಲಂದ್‌ಶಹರ್ ಜೈಲು ಫರೂಕಾಬಾದ್ ಜೈಲಿನ ನಂತರ ಉತ್ತರ ಪ್ರದೇಶದಿಂದ ಈ ಟ್ಯಾಗ್ ಪಡೆದ ಎರಡನೇ ಜೈಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ