Sunday, February 5, 2023

Latest Posts

ಅತ್ಯಾಚಾರ ಪ್ರಕರಣದಲ್ಲಿ ಬಿಎಸ್ಪಿ ಮಾಜಿ ಶಾಸಕನಿಗೆ 7 ವರ್ಷ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
16 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಜಿ ಶಾಸಕ ಸತ್ಯ ನಾರಾಯಣ ಸಂತು ಮತ್ತು ಅವರ ಆರು ಮಂದಿ ಸಹಾಯಕರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಉತ್ತರ ಪ್ರದೇಶದ ಹರ್ದೋಯ್‌ನಲ್ಲಿರುವ ಸ್ಥಳೀಯ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ. ಸತ್ಯ ನಾರಾಯಣ್ 2002 ರಿಂದ 2007 ರವರೆಗೆ ಬಿಎಸ್ಪಿ ಶಾಸಕರಾಗಿದ್ದರು.
ಮಾರ್ಚ್ 11, 2006 ರಂದು ಮಹಿಳೆಯೊಬ್ಬರು ನಾರಾಯಣ್ ಮತ್ತು ಅವರ ಸಹಾಯಕರ ಮೇಲೆ ಅತ್ಯಾಚಾರದ ಆರೋಪ ಹೊರಿಸಿ, ಹರ್ದೋಯ್‌ನ ಔತ್ರೌಲಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಹರ್ದೋಯ್, ಸತ್ಯ ದೇವು ಗುಪ್ತಾ ಅವರು ಮಾಜಿ ಶಾಸಕ ಮತ್ತು ಇತರ ಆರೋಪಿಗಳ ವಿರುದ್ಧ ಶಿಕ್ಷೆಯನ್ನು ಘೋಷಿಸಿದ್ದಾರೆ.
ಮಾರ್ಚ್ 11, 2006 ರಂದು, ಮಾಜಿ ಶಾಸಕ ಮತ್ತು ಅವರ ಹಿಂಬಾಲಕರು ಮಹಿಳೆಯ ಪತಿ ಮತ್ತು ಮಗನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಮಹಿಲೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಈ ಸಂಬಂಧ ಶಾಸಕ ಮತ್ತು ಅವರ ಸಹಾಯಕರಾದ ಮುನ್ವಾ, ಛೋಟು ಸಿಂಗ್, ದೇವೇಂದ್ರ ಸಿಂಗ್, ಜಿತೇಂದ್ರ ಸಿಂಗ್, ಸತ್ಯೇಂದ್ರ ಸಿಂಗ್, ಸವೇಂದ್ರ ಸಿಂಗ್, ರಾಜು ಸಿಂಗ್, ಪ್ರೇಮ್ ಪಾಲ್ ಮತ್ತು ಯಾಸೀನ್ ಯಾದವ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸತ್ಯೇಂದ್ರ ಮತ್ತು ಸವೇಂದ್ರನ ಪ್ರಕರಣ ಬಾಲಾಪರಾಧಿ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಯಾಸೀನ್ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!