CINE NEWS | ವಯಸ್ಸಾಯ್ತು ನಿವೃತ್ತಿ ತಗೊಳ್ಳಿ ಅಂದವ್ರಿಗೆ ಶಾರುಖ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ಸಾಕಷ್ಟು ಸಂಕಷ್ಟಗಳು ಎದುರಾಗಿದ್ದರೂ ಶಾರುಖ್ ಖಾನ್ ಸಿನಿಮಾ ರಿಲೀಸ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ಭರವಸೆ ಶಾರುಖ್‌ಗಿದೆ, ಈ ಮಧ್ಯೆ ಲೈವ್‌ನಲ್ಲಿ ನಿಮಗೆ ವಯಸ್ಸಾಯ್ತು ನಿವೃತ್ತಿ ತಗೊಳ್ಳಿ ಎಂದು ಶಾರುಖ್‌ಗೆ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದ ಶಾರುಖ್ ದೊಡ್ಡವರ ಜತೆ ಹಾಗೆಲ್ಲ ಮಾತನಾಡಬೇಡಿ ಎಂದು ತಮಾಷೆಯಾಗಿ ಉತ್ತರಿಸಿ ಸುಮ್ಮನಾಗಿದ್ದಾರೆ. ಹೇಳಿದಂತೆಯೇ ಪಠಾಣ್ ಸಿನಿಮಾ ಟ್ರೇಲರ್ ಜ.10ರಂದು ರಿಲೀಸ್ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!