ಕೇದಾರನಾಥದಲ್ಲಿ ಭಾರೀ ಹಿಮಪಾತ: ಟ್ರಕ್ಕಿಂಗ್‌ಗೆ ತೆರಳಿದ್ದವರಲ್ಲಿ ಓರ್ವ ಸಾವು, ಇನ್ನೊಬ್ಬರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೇದಾರನಾಥದ ರಾನ್ಸಿ ಟ್ರೆಕ್ಕಿಂಗ್‌ಗೆ ತೆರಳಿದ್ದ 10 ಜನರ ಗುಂಪಿನ ಇಬ್ಬರು ಹಿಮಪಾತದಲ್ಲಿ ಸಿಲುಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬನನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು. 10 ಸದಸ್ಯರ ತಂಡ ಪಶ್ಚಿಮ ಬಂಗಾಳದವರಾಗಿದ್ದು, ಕೇದಾರನಾಥ ಚಾರಣಕ್ಕೆ ತೆರಳಿದ್ದರು. ಅವರಲ್ಲಿ ಇಬ್ಬರು ತೀವ್ರ ಆರೋಗ್ಯ ಪರಿಸ್ಥಿತಿಗಳಿಂದ ಸಿಲುಕಿಕೊಂಡರು, ಆದರೆ ಇತರ ಎಂಟು ಜನ ಸುರಕ್ಷಿಯವಾಗಿ ವಾಪಸಾಗಿದ್ದು, ಇಬ್ಬರು ಹಿಮಪಾತದಲ್ಲಿ ಸಿಲುಕಿದ್ದರ ಬಗ್ಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ತಂಡವು ಅಗತ್ಯ ರಕ್ಷಣಾ ಸಾಧನಗಳೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿತು. ಇಬ್ಬರೂ ಚಾರಣಿಗರು ಕೇದಾರನಾಥದಿಂದ 6 ಕಿಮೀ ದೂರದಲ್ಲಿರುವ ಮಹಾಪಂಥ್ ಬಳಿ ಹಿಮಾವೃತ ಬಂಡೆಗಳ ನಡುವೆ ಸಿಲುಕಿರುವುದು ಕಂಡುಬಂದಿದೆ.

ತಕ್ಷಣ ಅಲ್ಲಿಗೆ ಹೋದ ಎಸ್‌ಡಿಆರ್‌ಎಫ್‌ ಇಬ್ಬರಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಮತ್ತೊಬ್ಬರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಎಸ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಅಸ್ವಸ್ಥ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ತಕ್ಷಣ ಕೇದಾರನಾಥ ಆಸ್ಪತ್ರೆಗೆ ದಾಖಲಿಸಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!