Wednesday, November 30, 2022

Latest Posts

ಹಾಲ್‌ ಟಿಕೆಟ್‌ ನಲ್ಲಿ ವಿದ್ಯಾರ್ಥಿನಿ ಫೋಟೋ ಬದಲು ಐಶ್ವರ್ಯ ರೈ ಫೋಟೋ ಹಾಕಿದ ವಿವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಾರ್ಖಂಡ್ ಧನ್‌ಬಾದ್‌ನ ಬಿನೋದ್ ಬಿಹಾರಿ ಮಹ್ತೊ ಕೊಯಲಾಂಚಲ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಯ ಹಾಲ್‌ ಟಿಕೆಟ್‌ ಪಡೆಯಲು ಹೋಗಿದ್ದ ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರವೇಶ ಪತ್ರದ ಕಾರ್ಡ್‌ನಲ್ಲಿದ್ದ ಫೋಟೋ ನೋಡಿ ಹೌಹಾರಿದ್ದಾಳೆ!. ವಿವಿಯು ವಿದ್ಯಾರ್ಥಿನಿಯ ಬದಲು ಬಾಲಿವುಡ್ ನಟಿ ಐಶ್ವರ್ಯ ರೈ ಫೋಟೋವನ್ನು ಹಾಲ್ ಟಿಕೆಟ್‍ನಲ್ಲಿ ಮುದ್ರಿಸಿತ್ತು.
ಈ ಬಗ್ಗೆ ವಿದ್ಯಾರ್ಥಿನಿ ಕಾಜಲ್ ಕುಮಾರಿ ಕುಲಪತಿ ಎಸ್‌ಕೆ ಬರನ್‌ವಾಲ್ ಅವರ ಬಳಿ ಪರಿಹಾರ ಕೋರಿದ್ದಾಳೆ.
ಪ್ರವೇಶ ಕಾರ್ಡ್‌ನಲ್ಲಿ ಫೋಟೋಗಳ ಮುದ್ರಿಸುವ ಜವಾಬಾದರಿಯನ್ನು ವಿಶ್ವವಿದ್ಯಾಲಯವು ಬೇರೆಯವರಿಗೆ ವಹಿಸಿತ್ತು ಎಂದು ಬರನ್ವಾಲ್ ಹೇಳಿದ್ದಾರೆ. ಇದು ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆ ತರುವ ಸಂಚಾಗಿದೆ. ಸಾಕಷ್ಟು ಗಮನವಹಿಸಿಯೇ ಪ್ರವೇಶ ಕಾರ್ಡ್ ರಚಿಸಲಾಗುತ್ತದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಿ, ಫಾರ್ಮ್ ಭರ್ತಿ ಮಾಡುವಾಗ ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಲಾಗಿತ್ತು. ಆದರೆ ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿದಾಗ ಇನ್ನಷ್ಟು ಆಶ್ಚರ್ಯವಾಯಿತು. ಅದರೊಂದಿಗೆ ನಟಿಯನ್ನು ಲಗತ್ತಿಸಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿನಿಗೆ ತೊಂದರೆಯಾಗದಂತೆ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!