ಉತ್ತರಕಾಶಿ ಸುರಂಗ ಕುಸಿತ : ಸಾಂಪ್ರದಾಯಿಕ ರ‍್ಯಾಟ್ ಹೋಲ್ ಮೈನಿಂಗ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡ ಉತ್ತರಕಾಶಿಯ ಸುರಂಗದಲ್ಲಿ 17 ದಿನದಿಂದ ಕಾರ್ಮಿಕರು ಸಿಲುಕಿದ್ದು, ಇಂದು ಸಾಂಪ್ರದಾಯಿಕ ರ‍್ಯಾಟ್ ಹೋಲ್ ಮೈನಿಂಗ್ ಆರಂಭ ಮಾಡಲಾಗಿದೆ.

ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಸರ್ಕಾರ ಎಲ್ಲ ರೀತಿ ಪ್ರಯತ್ನ ಮಾಡಿದ್ದು, ಆಧುನಿಕ ಯಂತ್ರಗಳಿಂದ ಕೆಲಸ ಸಫಲವಾಗಿಲ್ಲ. ಹಾಗಾಗಿ ಇದೀಗ ರ‍್ಯಾಟ್ ಹೋಲ್ ಮೈನಿಂಗ್ ಮೊರೆ ಹೋಗಲಾಗಿದ್ದು, ಕಾರ್ಮಿಕರೇ ರಂಧ್ರಗಳನ್ನು ಕೊರೆಯಲಿದ್ದಾರೆ.

ಮೇಘಾಲಯದಲ್ಲಿ ಈ ಮೈನಿಂಗ್ ವಿಧಾನ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಕಾರ್ಮಿಕರೇ ರಂಧ್ರಗಳನ್ನು ಕೊರೆಯುತ್ತಾರೆ. ಇದಕ್ಕಾಗಿ 12 ತಜ್ಞರನ್ನು ಕರೆಸಿಕೊಳ್ಳಲಾಗಿದೆ. ತಜ್ಞರು ಕೂಡ ರಂಧ್ರ ಕೊರೆಯಲಿದ್ದಾರೆ. ಕಲ್ಲು,ಮಣ್ಣಿನ ದೊಡ್ಡ ಹೆಂಟೆಗಳನ್ನು ಕತ್ತರಿಸಲು ಗ್ಯಾಸ್ ಕಟರ್ ಹಾಗೂ ಕೈಯಲ್ಲಿ ಹಿಡಿಯುವ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ.

ಈ ರೀತಿ ಕೆಲಸ ಮಾಡಿದ ಅನುಭವ ಇದೆ, ಆಕ್ಸಿಜನ್ ಮಾಸ್ಕ್ ಹಾಗೂ ಕನ್ನಡಕ ಬೇಕಾಗುತ್ತದೆ, ಒಬ್ಬರು ಕೊರೆಯುತ್ತಾರೆ, ಇನ್ನೊಬ್ಬರು ಅವಶೇಷಗಳನ್ನು ಸಂಗ್ರಹಿಸುತ್ತಾರೆ. ಟ್ರಾಲಿ ಮೂಲಕ ಅವಶೇಷಗಳನ್ನು ಎತ್ತಿ ಹೊರಹಾಕಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!