ರಾಪಿಡೋ ಸಂಸ್ಥೆಯಿಂದ ಬಂಪರ್‌ ಆಫರ್‌, ಈ ದಿನದಂದು ಎಲ್ಲರಿಗೂ ಉಚಿತ ಸವಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಪ್ರಮುಖ ಬೈಕ್ ಟ್ಯಾಕ್ಸಿ ಕಂಪನಿ ರಾಪಿಡೋ ಮತದಾನದ ದಿನದಂದು ಉಚಿತ ಪ್ರಯಾಣ ಸೇವೆ ನೀಡುವುದಾಗಿ ಘೋಷಿಸಿದೆ. ಎಲ್ಲಾ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮತದಾರರಿಗೆ ಉಚಿತವಾಗಿ ಪ್ರಯಾಣಿಸಬಹುದೆಂದು ತಿಳಿಸಿದೆ.

ಹೈದರಾಬಾದ್ ನಗರದ ಎಲ್ಲಾ 2,600 ಮತಗಟ್ಟೆ ಕೇಂದ್ರಗಳಿಗೆ ಮತದಾರರನ್ನು ಉಚಿತವಾಗಿ ಸಾಗಿಸುವುದಾಗಿ ರಾಪಿಡೊ ಕಂಪನಿ ಬಹಿರಂಗಪಡಿಸಿದೆ. ಮತದಾನ ಕೇಂದ್ರ ದೂರವಿದರ ಜೊತೆಗೆ ಕೆಲವರು ಪ್ರಯಾಣದ ವೆಚ್ಚದಿಂದಾಗಿ ತಮ್ಮ ಹಕ್ಕನ್ನು ಚಲಾಯಿಸದಿರಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಸಂಸ್ಥೆ ತಿಳಿಸಿದೆ.

ನಗರದ ಯಾವ ಮೂಲೆಯಿಂದಾದರೂ ಸರಿ ತಮ್ಮ ಮತಗಟ್ಟೆಗೆ ಉಚಿತವಾಗಿ ಪ್ರಯಾಣಿಸಲು ಬಯಸುವ ಮತದಾರರಿಗೆ ಸಹಾಯ ಮಾಡುವುದಾಗಿ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!