ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ನಟ ಚಂದನ್ ಶೆಟ್ಟಿತಂದೆಯಾಗುತ್ತಿದ್ದಾರೆ ಎಂಬ ಎಲ್ಲೆಡೆ ಸುದ್ದಿ ಹರಿದಾಡುತ್ತಿದ್ದು, ಇದೀಗ ಈ ಕುರಿತು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ನಾನು ತಂದೆಯಾಗುತ್ತಿಲ್ಲ. ಅದು ರೀಲ್ಸ್ ಅಷ್ಟೇ ಎಂದು ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ.
ಚಂದನ್ ಶೆಟ್ಟಿ ನಿನ್ನೆಯಷ್ಟೇ ತಮ್ಮ ಪತ್ನಿ ನಿವೇದಿತಾ ಗೌಡ ಜೊತೆ ಒಂದು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ವೀಡಿಯೋದಲ್ಲಿ Fat+Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಕೇಳಿದ್ದಾರೆ. ಅದಕ್ಕೆ ಉತ್ತರ ಫಾದರ್ ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.
ರೀಲ್ಸ್ ನೋಡಿದ ಆತ್ಮೀಯರೂ ಕೂಡ ಕರೆ ಮಾಡಿ ದಂಪತಿಗೆ ಅಭಿನಂದನೆಗಳನ್ನ ತಿಳಿಸುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಚಂದನ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲೇ ಸ್ಪಷ್ಟನೆ ಕೊಟ್ಟಿದ್ದಾರೆ.
ನಾವು ಇನ್ನೂ ಮಗುವಿಗೆ ಸಿದ್ಧರಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವಾಗ ಖಂಡಿತವಾಗಿಯೂ ಘೋಷಿಸುತ್ತೇವೆ ಎಂದು ಉತ್ತರ ನೀಡಿದ್ದಾರೆ.