ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಮತ್ತೆ ರಜೆ ವಿಸ್ತರಣೆ

ದಿಗಂತ ವರದಿ ರಾಮನಗರ :

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೀಡಿದ್ದ ರಜೆಯನ್ನು ಅನಿರ್ದಿಷ್ಟ ಅವಧಿಗೆ ವಿಸ್ತರಿಸಲಾಗಿದೆ.
ಹಿಜಾಬ್ ಧರಿಸಿ ತರಗತಿಗಳಲ್ಲಿ ಕೂರಲು ಅನುಮತಿ ನೀಡಬೇಕು‌ ಎಂದು ಒತ್ತಾಯಿಸಿ ಇದೇ ತಿಂಗಳ 16ರಂದು ವಿದ್ಯಾರ್ಥಿನಿಯರು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಸಾರ್ವಜನಿಕರೂ ಗುಂಪು ಸೇರಿದ್ದು, ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.
ಈ ಹಿನ್ನೆಲೆಯಲ್ಲಿ ಇದೇ 17ರಿಂದ ಕಾಲೇಜಿಗೆ ರಜೆ ನೀಡಿದ್ದು, ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!