June 16, 2026
Tuesday, June 16, 2026
spot_img

ಎದುರಾಳಿ ಆಟಗಾರನನ್ನು ತಳ್ಳಿದ ವೈಭವ್‌ ಸೂರ್ಯವಂಶಿಗೆ ಬ್ಯಾನ್‌ ಭೀತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಣ ಪಂದ್ಯದ ಬಳಿಕ ಘರ್ಷಣೆಯಾಗಿದೆ. ಟೀಂ ಇಂಡಿಯಾದ ಯುವ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಶ್ರೀಲಂಕಾ ತಂಡದ ಆಟಗಾರನ ಮೇಲೆ ಕೈ ಮಾಡಿದ್ದಾರೆ, ತಳ್ಳಿದ್ದಾರೆ. ಇದರಿಂದಾಗಿ ವೈಭವ್‌ಗೆ ಬ್ಯಾನ್‌ ಭೀತಿ ಎದುರಾಗಿದೆ.

ಪ್ಲೇಗ್ರೌಂಡ್‌ನಲ್ಲಿ ಶಿಸ್ತು ಮುಖ್ಯ. ಆದರೆ ವೈಭವ್‌ ಸೂರ್ಯವಂಶಿ ಅಶಿಸ್ತಿನ ನಡವಳಿಕೆ ತೋರಿದ್ದು, ಬ್ಯಾನ್‌ ಆಗುವ ಸಾಧ್ಯತೆಗಳಿವೆ.

ಆಗಿದ್ದೇನು?

ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.2 ಓವರ್​ಗಳಲ್ಲಿ 265 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ 50 ಓವರ್​ಗಳಲ್ಲಿ 265 ರನ್​ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು. ನಂತರ ಸೂಪರ್‌ ಓವರ್‌ ಆಡಿಸಲಾಯಿತು. ಇದರಲ್ಲಿ ಶ್ರೀಲಂಕಾ ಬ್ಯಾಟರ್ಸ್‌ 16 ರನ್‌ ಬಾರಿಸಿದ್ದರು. ಇತ್ತ ಟೀಂ ಇಂಡಿಯಾ 9 ರನ್​ಗಳಿಸಿ ಸೋಲೊಪ್ಪಿಕೊಂಡಿತ್ತು. ಸೋಲಿನ ನಂತರ ವೈಭವ್‌ ಪೆವಿಲಿಯನ್‌ ಕಡೆ ಹೋಗುವಾಗ ಶ್ರೀಲಂಕಾ ಆಟಗಾರ ವಿಶೇನ್‌ ಹಾಲಂಬಾ ವೈಭವ್‌ಗೆ ಏನೋ ಹೇಳಿದ್ದಾರೆ. ಇದರಿಂದ ಸಿಟ್ಟಾದ ವೈಭವ್‌ ಅವರ ಬಳಿ ಹೋಗಿದ್ದಾರೆ. ಮಾತಿನ ಚಕಮಕಿ ನಂತರ ವೈಭವ್‌ ವಿಶೇನ್‌ ಅವರನ್ನ ಕೈಯಿಂದ ತಳ್ಳುತ್ತಿರುವುದು ಕಾಣಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !