May 29, 2026
Friday, May 29, 2026
spot_img

ವೈಭವ್ ಸೂರ್ಯವಂಶಿ ಬ್ಯಾಟ್‌ ನಲ್ಲಿ AI ಚಿಪ್ ಇದೆ: ಪಾಕ್ ಕ್ರಿಕೆಟ್ ವಿಶ್ಲೇಷಕ ಆರೋಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್‌ನ ಸ್ಫೋಟಕ ಬ್ಯಾಟ್ಸ್ ಮ್ಯಾನ್ ವೈಭವ್ ಸೂರ್ಯವಂಶಿ ವಿರುದ್ಧ ಪಾಕ್ ಕ್ರಿಕೆಟ್ ವಿಶ್ಲೇಷಕ ನೌಮಾನ್ ನಿಯಾಝ್ ಆರೋಪಯೊಂದನ್ನು ಮಾಡಿದ್ದಾರೆ.

ಅದೇನೆಂದರೆ, ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ ಎಐ ಚಿಪ್ ಇದ್ದು, ಹೀಗಾಗಿ ಬೌಲ್ ರಭಸವಾಗಿ ಹೋಗುತ್ತಿದೆ. ಒಮ್ಮೆ ಆತನ ಬ್ಯಾಟನ್ನು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿಯಾಜ್, ಆ ಹುಡುಗ ಯಾರು? ಯಾವ ರೀತಿ ಡೋಪಿಂಗ್ ತಪಾಸಣೆ ಮಾಡುತ್ತೇವೆ. ಅದೇ ರೀತಿ ಆತನ ಬ್ಯಾಟ್ ಅನ್ನು ಪರಿಶೀಲನೆ ನಡೆಸಬೇಕು. ಬಹುಶಃ ಬ್ಯಾಟ್ ನಲ್ಲಿ AI ಚಿಪ್ ಅಳವಡಿಸಿರಬಹುದು. ಯಾಕೆಂದರೆ 15 ವರ್ಷದ ಹುಡುಗನಿಗೆ ಇಷ್ಟೊಂದು ಶಕ್ತಿ ಇರಲು ಸಾಧ್ಯವಿಲ್ಲ. ಆತ ವಿಶ್ವ ಚಾಂಪಿಯನ್ ಆದಾಗ ಹುಟ್ಟಿದವನು. ಅವನ ಆಟಕ್ಕೂ ಅವನು ಶಕ್ತಿಗೂ ಸಂಬಂಧವೇ ಇಲ್ಲ. ಆತ 360 ಡಿಗ್ರಿಯಲ್ಲಿ ಬಾರಿಸುವ ಹೇಗೆ ಸಾಧ್ಯ ಎಂಬ ಅನುಮಾನ ಬರುತ್ತೆ ಎಂದು ಹೇಳಿದ್ದಾರೆ.

ಈ ಬಾರಿ ಟೂರ್ನಿಯಲ್ಲಿ 8 ಪಂದ್ಯಗಳಿಂದ 357 ರನ್ ಗಳಿಸಿರುವ ವೈಭವ್, ಸದ್ಯ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !