ಮೃತಪಟ್ಟಿದ್ದಾರೆ ಎಂದ ವೈದರು, ಅಂತ್ಯಸಂಸ್ಕಾರಕ್ಕೂ ಮುನ್ನ ಕಣ್ತೆರೆದ ಯುವಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿ ಅಂತ್ಯಸಂಸ್ಕಾರಕ್ಕೂ ಮುನ್ನ ಕಣ್ತೆರಿದಿದ್ದಾರೆ.ಇದರಿಂದಾಗಿ ಮೂವರು ವೈದ್ಯರನ್ನು ಅಮಾನತುಗೊಳಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದ ಶ್ರವಣ ದೋಷ ಹೊಂದಿದ್ದ ಯುವಕನನ್ನು ರೋಹಿತಾಶ್ ಕುಮಾರ್ ಎಂದು ಗುರುತಿಸಲಾಗಿದೆ. ಯಾವುದೇ ಕುಟುಂಬ ಇಲ್ಲದೆ ಆಶ್ರಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ಆತನನ್ನು ಜಿಲ್ಲಾ ಆಸ್ಪತ್ರೆಗೆ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಂಚನಾಮೆ ಮಾಡಿದ್ದ ಪೊಲೀಸರು ದೇಹವನ್ನು ಅಂತ್ಯಸಂಸ್ಕಾರ ಮಾಡಲು ಕರೆದೊಯ್ದಿದ್ದರು. ಚಟದ ಮೇಲೆ ದೇಹವನ್ನು ಇಟ್ಟಿದ್ದಾಗ ಕುಮಾರ್ ಇದ್ದಕ್ಕಿದ್ದಂತೆ ಉಸಿರಾಡಲು ಶುರು ಮಾಡಿದ್ದಾರೆ. ಕೂಡಲೇ ಅಂಬ್ಯುಲೆನ್ಸ್ ಕರೆಯಿಸಿದ್ದು, ಆಸ್ಪತ್ರೆಗೆ ವಾಪಸ್ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನನ್ನು ನಂತರ ಜೈಪುರಕ್ಕೆ ಕರೆದೊಯ್ಯಲಾಗುತಿತ್ತು. ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು. ಶವಗಾರದಲ್ಲಿ 2 ಗಂಟೆಗಳ ಕಾಲ ದೇಹವನ್ನು ಇಟ್ಟಿದ್ದರು.

ವೈದ್ಯರ ನಿರ್ಲಕ್ಷ್ಯವನ್ನು ಪರಿಗಣಿಸಿದ ಜುಂಜುನು ಜಿಲ್ಲಾಧಿಕಾರಿ ರಾಮಾವತಾರ್ ಮೀನಾ, ಗುರುವಾರ ರಾತ್ರಿ ಡಾ. ಯೋಗೇಸ್ ಜಖಾರ್, ಡಾ. ನವನೀತ್ ಮೀಲ್ ಮತ್ತು ಪಿಎಂಒ ಡಾ.ಸಂದೀಪ್ ಪಚಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಈ ಮಧ್ಯೆ ಕಂದಾಯ ಅಧಿಕಾರಿ ಮಹೇಂದ್ರ ಮುಂಡ್, ಸಾಮಾಜಿಕ ನ್ಯಾಯ ಇಲಾಖೆ ಉಪ ನಿರ್ದೇಶಕರಾದ ಪಾವನ್ ಪೂನಿಯಾ ಕೂಡಾ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!