ವೈಕುಂಠ ಏಕಾದಶಿಗೆ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ 7 ಕೋಟಿ ಹಣ ಸಂಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜನವರಿ 2 ರಂದು ನಡೆದ ವೈಕುಂಠ ಏಕಾದಶಿಗೆ ತಿರುಪತಿಗೆ ಭಕ್ತ ಸಾಗರವೇ ಹರಿದು ಬಂದಿದ್ದು, ತಿರುಮಲ ತಿರುಪತಿ ದೇವಸ್ಥಾನ ಇತಿಹಾಸದಲ್ಲಿ ಮೊದಲ ಬಾರಿಗೆ ತಿಮ್ಮಪ್ಪನ ಹುಂಡಿ ಸಂಗ್ರಹವು 7.68 ಕೋಟಿ ರೂ. ದಾಖಲೆಯ ಆದಾಯ ದಾಖಲಿಸಿದೆ.

ಎಬಿಪಿ ದೇಶಂ ವರದಿಯ ಪ್ರಕಾರ, ತಿರುಮಲದ ಬೆಟ್ಟದ ದೇವಾಲಯದಲ್ಲಿ ಒಂದೇ ದಿನದಲ್ಲಿ ಮಾಡಿದ ಅತಿ ಹೆಚ್ಚು ಹುಂಡಿ ಆದಾಯ ಇದಾಗಿದೆ. ಭಾನುವಾರ 69,414 ಭಕ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ಟೋಬರ್ 23 ರಂದು ತಿರುಮಲ ಹುಂಡಿಯಲ್ಲಿ ಹಿಂದಿನ ಅತಿ ಹೆಚ್ಚು ಸಂಗ್ರಹ 6.31 ಕೋಟಿ ರೂ. ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!