ವೈಶಾಲಿ ಟಕ್ಕರ್ ಆತ್ಮಹತ್ಯೆಗೆ ಎಕ್ಸ್ ಬಾಯ್ ಫ್ರೆಂಡ್ ಕಾರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ನಿ ವೈಶಾಲಿ ಟಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಲವ್ ಅಫೇರ್ ಕಾರಣ ಇರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ನೆರೆಮನೆಯವನಾದ ರಾಹುಲ್‌ನಿಂದ ವೈಶಾಲಿ ಕಿರುಕುಳಕ್ಕೆ ಒಳಗಾಗಿದ್ದರು. ತನಗಾಗುತ್ತಿದ್ದ ಮಾನಸಿಕ ಒತ್ತಡದ ಬಗ್ಗೆ ವೈಶಾಲಿ ಡೆತ್‌ನೊಟ್‌ನಲ್ಲಿ ಬರೆದಿದ್ದಾರೆ.

ಮಾಜಿ ಪ್ರಿಯಕರ ರಾಹುಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಹಾಗೂ ವೈಶಾಲಿ ಮದುವೆಗೂ ಆತನೇ ಕಲ್ಲು ಹಾಕಿದ್ದ ಎನ್ನಲಾಗಿದೆ. ತಾನು ಮದುವೆಯಾಗುತ್ತಿರಲಿಲ್ಲ, ಮದುವೆಯಾಗಲೂ ಬಿಡುತ್ತಿಲ್ಲ ಎಂದಿದ್ದಾರೆ. ಆತನಿಗೆ ಈಗಾಗಲೇ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ವೈಶಾಲಿ ರೂಮ್‌ನಿಂದ ಐಪ್ಯಾಡ್, ಐಫೋನ್ ವಶಕ್ಕೆ ಪಡೆದಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!