ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಕಂಟೆಸ್ಟೆಂಟ್‌ಗಳ ಮಾತು ಹದ್ದು ಮೀರಿ ಸಾಗುತ್ತಿದೆ. ಬೇಸಿಕ್ ಸೆನ್ಸ್ ಹಾಗೂ ಕ್ಯಾಮರಾ ಮುಂದೆ ಇದ್ದೇವೆ ಎನ್ನುವುದನ್ನು ಮರೆತು ಮಾತನಾಡಲು ಆರಂಭಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸೌಂದರ್ಯಾ ವೈಷ್ಣವಿ ವಿರುದ್ಧ ತನ್ನ ನಾಲಗೆ ಹರಿಬಿಟ್ಟಿದ್ದು, ನೀನು ಮೇಲಿನಿಂದ ಕೆಳಗಿನವರೆಗೂ ಗಲೀಜು ಎಂದು ಕೆಟ್ಟದಾಗಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಸೌಂದರ್ಯಾ ಅಡುಗೆ ಮನೆಯ ಸಿಂಕ್ ಬಳಿ ನಿಂತು ಹಲ್ಲನ್ನು ಉಜ್ಜುತ್ತಿರುತ್ತಾರೆ. ಈ ವೇಳೆ ಅದನ್ನು ನೋಡಿದ ವೈಷ್ಣವಿ, ಅಡುಗೆ ಮನೆಯ ಸಿಂಕ್‌ನಲ್ಲಿ ಬೇಡ ಬಾತ್‌ರೂಮ್ ಸಿಂಕ್‌ನಲ್ಲಿ ಬ್ರಶ್ ಮಾಡಿ. ಇಲ್ಲಿ ಮಾಡಿದ್ರೆ ಅಸಹ್ಯ ಎನಿಸುತ್ತದೆ ಎಂದು ಹೇಳಿದ್ದಾರೆ. ಅಸಹ್ಯ ಎಂದು ಹೇಳಿದ ತಕ್ಷಣ ರೇಗಾಡಿದ ಸೌಂದರ್ಯ ಹಲ್ಲುಜ್ಜೋದು ಅಸಹ್ಯ ಅಲ್ಲ, ಹಲ್ಲುಜ್ಜದಿದ್ದರೆ ಅಸಹ್ಯ ಎಂದು ಹೇಳಿದ್ದಾರೆ.
ನಿಮ್ಮ ಮುಖ ಅಸಹ್ಯ, ನಿಮ್ಮ ದೇಹ ಮೇಲಿನಿಂದ ಕೆಳಗಿನವರೆಗೂ ಅಸಹ್ಯ ಎಂದು ಮಾತನಾಡಿದ್ದಾರೆ. ಅದಕ್ಕೆ ವೈಷ್ಣವಿ ಕೆಟ್ಟದಾಗಿ ಮಾತನಾಡಿದರೆ ಏನು ಲಾಭ? ಕೂಲ್ ಆಗಿರಿ ಎಂದಿದ್ದಾರೆ. ಅದಕ್ಕೆ ಸೌಂದರ್ಯ, ನಿನಗೆ ಸಂಬಂಧವೇ ಇಲ್ಲದಿರೋ ವಿಷಯಕ್ಕೆ ತಲೆ ಹಾಕಬೇಡ. ನನಗೆ ಬ್ರಶ್ ಮಾಡ್ಬೇಡ ಅಂತ ಹೇಳೋಕೆ ನೀನು ಯಾರು? ನಾನು ಈ ಮನೆಯ ಸ್ಪರ್ಧಿ ನನ್ನಿಷ್ಟ ಬಂದಹಾಗೆ ಮಾಡ್ತೀನಿ ಎಂದಿದ್ದಾರೆ.
ಅದಕ್ಕೆ ವೈಷ್ಣವಿ ಅಡುಗೆ ಮನೆಯ ಕಟ್ಟೆಗಳ ಮೇಲೆ ಕುಳಿತು ಊಟ ಮಾಡ್ತೀವಿ, ಅದೇ ಸಿಂಕ್‌ನಲ್ಲಿ ತಟ್ಟೆ ಹಾಕ್ತೀವಿ. ಹೀಗಿರುವಾಗ ಹಲ್ಲುಜ್ಜಿ ಉಗಿದರೆ ಅಸಹ್ಯ ಅಲ್ವಾ ಎಂದಿದ್ದಾರೆ. ಮೇಲಿಂದ ಕೆಳಗೆ ನೀನೇ ಗಲೀಜು. ಬಾಯಿ ಮುಚ್ಚಿಕೊಂಡು ಹೋಗು. ಅಡುಗೆ ಮನೆ ನಿನ್ನ ಪರ್ಸನಲ್ ಪ್ರಾಪರ್ಟಿ ಅಲ್ಲ. ಸ್ಪರ್ಧಿಯ ರೀತಿ ಇರು. ಕ್ಯಾಪ್ಟನ್ ಆಗಲು ಹೋಗಬೇಡ. ಹೋಗೆ ಅಸಹ್ಯ ಮುಖದವಳೇ ಎಂದು ಹೇಳಿದ್ದಾರೆ.



