ಪ್ರಧಾನಿ ಮೋದಿಯನ್ನು ಶ್ರೀಕೃಷ್ಣನಿಗೆ ಹೋಲಿಸಿದ ವಜುಭಾಯಿ​ ವಾಲಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಂಶಪಾರಂಪರ್ಯ ರಾಜಕೀಯದ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀಕೃಷ್ಣನಿಗೆ ಕರ್ನಾಟಕದ ಮಾಜಿ ರಾಜ್ಯಪಾಲ ವಜುಭಾಯಿ​ ವಾಲಾ ಹೋಲಿಕೆ ಮಾಡಿದ್ದಾರೆ.
ಮಹಾಭಾರತದ ಸಮಯದಲ್ಲಿ ಹೇಗೆ ಶ್ರೀಕೃಷ್ಣ ಏಕಪಕ್ಷೀಯತೆಯ ವಿರುದ್ಧ ಹೋರಾಡುತ್ತಿದ್ದರು. ಪ್ರಸ್ತುತ ಕಾಲದಲ್ಲಿ ಸ್ವಜನಪಕ್ಷಪಾತದ ವಿರುದ್ಧ ಪ್ರಧಾನಿ ಮೋದಿ ಅವರೂ ಹೋರಾಡುತ್ತಿದ್ದಾರೆ ಎಂದು ಹೇಳಿದರು

ರಾಜ್‌ಕೋಟ್‌ನಲ್ಲಿ ಇಂದು ನಡೆದ ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡಿದ ವಾಲಾ , ಪ್ರಧಾನಿ ಮೋದಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಕೆಂಪುಕೋಟೆಯಲ್ಲಿ ಭಾಷಣದಲ್ಲಿ ಭ್ರಷ್ಟಾಚಾರ ಮತ್ತು ಪರಿವಾರ ರಾಜಕೀಯದ ವಿರುದ್ಧ ನಾವು ಹೋರಾಡಬೇಕೆಂಬ ಹೇಳಿಕೆಯನ್ನು ಉಲ್ಲೇಖಿಸಿ ಈ ಅಭಿಪ್ರಾಯಿಸಿದರು.

ಗುಜರಾತ್​ನ ವಿಧಾನಸಭೆಯ ಎಲ್ಲ 182 ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಆದರೆ, ಇದು ಭಾರತೀಯ ಜನತಾ ಪಕ್ಷಕ್ಕೆ ಅಸಾಧ್ಯವಲ್ಲ. ಪಕ್ಷದ ಬದ್ಧತೆ ಮತ್ತು ಚುನಾವಣೆಯಲ್ಲಿ ಹೋರಾಡುವ ಸಂಕಲ್ಪದೊಂದಿಗೆ 182 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದರು.

ಗುಜರಾತ್​ ಚುನಾವಣೆಗೆ ಆಮ್​ ಆದ್ಮಿ ಪಕ್ಷ ಪ್ರವೇಶಿಸಿದ್ದರೂ ಬಿಜೆಪಿಗೆ ಯಾವುದೇ ಹಾನಿಯಾಗಲ್ಲ. ರಾಜ್ಯ ಚುನಾವಣಾ ಅಖಾಡಕ್ಕೆ ಮೂರನೇ ಅಥವಾ ನಾಲ್ಕನೇ ಮತ್ತು ಐದನೇ ಅಂಗ ಬಂದರೂ ಬಿಜೆಪಿಯೇ ಗೆಲ್ಲುತ್ತದೆ. ಯಾವ ಪಕ್ಷ, ಯಾವ ರೀತಿಯ ಅಭಿವೃದ್ಧಿ ಕೆಲಸ ಮಾಡಿದೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಬಿಜೆಪಿ ಜನರ ಹಿತಕ್ಕಾಗಿ ಬದ್ಧವಾಗಿದ್ದು, ಅದಕ್ಕಾಗಿಯೇ ಜನರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ವಾಲಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!