ನನ್ನ ಸಮಯದ ಮೌಲ್ಯ ಅದಾನಿ, ಟಾಟಾ, ಅಂಬಾನಿ, ಬಿರ್ಲಾಗಿಂತ ಹೆಚ್ಚು : ರಾಮ್‌ದೇವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅದಾನಿ, ಅಂಬಾನಿ, ಬಿರ್ಲಾಗಿಂತ ನನ್ನ ಸಮಯದ ಮೌಲ್ಯ ಹೆಚ್ಚು ಎಂದು ಬಾಬಾ ರಾಮ್‌ದೇವ್ ಹೇಳಿದರು.

ಗೋವಾದ ಪಣಜಿಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಸಮ್ಮುಖದಲ್ಲಿ ರಾಮ್‌ದೇವ್ ತಮ್ಮ ಸಹಾಯಕ ಆಚಾರ್ಯ ಬಾಲಕೃಷ್ಣ ಅವರನ್ನು ಸನ್ಮಾನಿಸಲು ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಕಾರ್ಪೊರೇಟ್‌ಗಳು ತಮ್ಮ ಶೇಕಡಾ 99 ರಷ್ಟು ಸಮಯವನ್ನು ಸ್ವಹಿತಾಸಕ್ತಿಗಾಗಿ ಬಳಸುತ್ತಾರೆ, ಆದರೆ ನೋಡುವವರ ಕಣ್ಣಿಗೆ ಸಮಯವು ಎಲ್ಲರ ಒಳಿತಿಗಾಗಿ ಎಂದು ಅನಿಸಿಬಿಡುತ್ತದೆ ಎಂದು ಯೋಗ ಗುರು ರಾಮದೇವ್ ಹೇಳಿದರು.

“ನಾನು ಹರಿದ್ವಾರದಿಂದ ಮೂರು ದಿನ ಇಲ್ಲಿಗೆ ಬಂದಿದ್ದೇನೆ. ನನ್ನ ಸಮಯದ ಮೌಲ್ಯವು ಅದಾನಿ, ಅಂಬಾನಿ, ಟಾಟಾ ಮತ್ತು ಬಿರ್ಲಾಗಿಂತ ಹೆಚ್ಚು. ಕಾರ್ಪೊರೇಟ್‌ಗಳು ತಮ್ಮ ಶೇಕಡಾ 99 ರಷ್ಟು ಸಮಯವನ್ನು ಸ್ವಹಿತಾಸಕ್ತಿಗಾಗಿ ಕಳೆಯುತ್ತಾರೆ, ಆದರೆ ನೋಡುವವರ ಸಮಯವು ಸಾಮಾನ್ಯ ಒಳಿತಿಗಾಗಿ ಎನಿಸುತ್ತದೆ, ”ಎಂದು ಅವರು ಪ್ರತಿಪಾದಿಸಿದರು.

ತಮ್ಮ ವೃತ್ತಿಪರ ಆಡಳಿತ, ಪಾರದರ್ಶಕ ನಿರ್ವಹಣೆ ಮತ್ತು ಹೊಣೆಗಾರಿಕೆಯಿಂದಾಗಿ ಈ ಹಣಕಾಸು ವರ್ಷದಲ್ಲಿ 40,000 ಕೋಟಿ ರೂಪಾಯಿ ವಹಿವಾಟು ನಡೆಸುವ ಸಂಸ್ಥೆಗೆ ಪತಂಜಲಿಯನ್ನು ಪುನಶ್ಚೇತನಗೊಳಿಸಿದ್ದಕ್ಕಾಗಿ ಬಾಲಕೃಷ್ಣ ಅವರನ್ನು ಶ್ಲಾಘಿಸಿದರು.

ಪತಂಜಲಿಯಂತಹ ಸಾಮ್ರಾಜ್ಯಗಳನ್ನು ರಚಿಸುವ ಮೂಲಕ ಭಾರತವನ್ನು ‘ಪರಮ ವೈಭವಶಾಲಿ’ ಮಾಡುವ ಕನಸನ್ನು ಸಾಧಿಸಬಹುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!