ವಮಿಕಾ ಫೋಟೊ ರಿವೀಲ್: ಸ್ಪೋರ್ಟ್ಸ್ ಚಾನೆಲ್ ವಿರುದ್ಧ ಅಭಿಮಾನಿಗಳು ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮಗಳು ವಮಿಕಾ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ.
ನಿನ್ನೆ ನಡೆದ ಪಂದ್ಯದ ವೇಳೆ ಅನುಷ್ಕಾ ವಮಿಕಾಳನ್ನು ಎತ್ತಿಕೊಂಡು ಮ್ಯಾಚ್ ವೀಕ್ಷಿಸುತ್ತಿದ್ದರು. ಈ ವೇಳೆ ವಿರಾಟ್ ಅರ್ಧ ಸೆಂಚುರಿ ಬಾರಿಸಿದ್ದು, ಮಗಳು ವಮಿಕಾ ಕಡೆ ಬ್ಯಾಟ್ ತೋರಿಸಿದ್ದಾರೆ.

After Anushka's Picture with Vamika, Virat Kohli's Childhood Photo is a Hit  with Fansಈ ಸಂದರ್ಭವನ್ನು ಕ್ಯಾಮೆರಾಮೆನ್ ಕ್ಯಾಚ್ ಮಾಡಿದ್ದು, ವಮಿಕಾಳನ್ನು ಎಲ್ಲರಿಗೂ ತೋರಿಸಿದ್ದಾರೆ.
ಒಂದು ವರ್ಷದಿಂದಲೂ ಮಗಳ ಪ್ರೈವೆಸಿ ಬಗ್ಗೆ ಗಮನ ಹರಿಸಿದ್ದ ದಂಪತಿ ಮಗಳ ಫೋಟೊ ಎಲ್ಲಿಯೂ ರಿವೀಲ್ ಆಗೋಕೆ ಬಿಟ್ಟಿರಲಿಲ್ಲ. ಮಾಧ್ಯಮದವರನ್ನೂ ಫೋಟೊ ತೋರಿಸದಂತೆ ಮನವಿ ಮಾಡುತ್ತಾ ಬಂದಿದ್ದರು.

Netizens dig out Virat Kohli's childhood pictures as they shower love on  Vamika; call her 'Junior Kohli' - Read adorable tweetsಆದರೆ ಇದೀಗ ಮಗಳ ಫೋಟೊ ರಿವೀಲ್ ಆಗಿದೆ. ವರ್ಷದಿಂದ ಫೋಟೊ ನಿರೀಕ್ಷೆಯಲ್ಲಿದ್ದ ವಿರುಷ್ಕಾ ಅಭಿಮಾನಿಗಳು ಮಾತ್ರ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ವಮಿಕಾ ಫೋಟೊ ವೈರಲ್ ಆಗುತ್ತಿದ್ದಂತೆ ಅನುಷ್ಕಾ ಹಾಗೂ ವಿರಾಟ್‌ನ ಬಾಲ್ಯದ ಫೋಟೊಗಳು ವೈರಲ್ ಆಗುತ್ತಿವೆ. ವಮಿಕಾ ಯಾರ ಥರ ಇದ್ದಾಳೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

Virat Kohli is all hearts for wife Anushka Sharma seeing her adorable  childhood photosಆದರೆ ಕೆಲ ಅಭಿಮಾನಿಗಳು ಚಾನೆಲ್ ವಿರುದ್ಧ ಗರಂ ಆಗಿದ್ದಾರೆ. ಅವರ ಇಚ್ಛೆಗೆ ವಿರುದ್ಧವಾಗಿ ಮಗಳನ್ನು ತೋರಿಸೋ ಅವಶ್ಯಕತೆ ಏನಿತ್ತು ಎಂದು ಕಿಡಿಕಾಡಿದ್ದಾರೆ.

ವಮಿಕಾಳನ್ನು ನೋಡಿದ್ದು ನಮಗೆ ಖುಷಿ ವಿಷಯ ಆದರೆ ಅವರ ತಂದೆ-ತಾಯಿ ಇದಕ್ಕೆ ರೆಡಿ ಇದ್ದಂತೆ ಕಾಣುತ್ತಿಲ್ಲ. ಅವರು ಜನರಿಗೆ ಮಗಳನ್ನು ತೋರಿಸಬೇಕು ಎಂದು ಮನಸ್ಸು ಮಾಡಿದ್ದರೆ ಯಾವಾಗಲೋ ತೋರಿಸುತ್ತಿದ್ದರು. ಚಾನೆಲ್ ಮಾಡಿದ್ದು ತಪ್ಪು ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!