ಕ್ರೀಡಾಪಟುಗಳ ಸಾಧನೆಗೆ ವನವಾಸಿ ಕಲ್ಯಾಣ ಉತ್ತಮ ವೇದಿಕೆ: ಶ್ರೀಪಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಧಾರವಾಡ: ದೇಶದಲ್ಲಿ ಕ್ರೀಡಾಪಟುಗಳು ಸಾಧನೆಗೈಯಲು ವನವಾಸಿ ಕಲ್ಯಾಣ ನಿರಂತರವಾಗಿ ಉತ್ತಮ ವೇದಿಕೆ ಒದಗಿಸುತ್ತಿದೆ ಎಂದು ವನವಾಸಿ‌ ಕಲ್ಯಾಣದ ದಕ್ಷಿಣ ಮಧ್ಯ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಜಿ. ಹೇಳಿದರು.

ನಗರದ ಆದರ್ಶ ಬಾಲಿಕಾ ಪ್ರೌಢಶಾಲೆ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆ ಉದ್ಘಾಟನೆಯಲ್ಲಿ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆ ನೋಡಿದಾಗ ಭಾರತದ ಪದಕ ಸಾಧನೆ ಉಳಿದ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಮಹತ್ವ ನೀಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು. ಈ ಕ್ರೀಡಾಕೂಟದ ಅವಕಾಶವನ್ನು ಕ್ರೀಡಾಪಟುಗಳು ಯಶಸ್ವಿಯಾಗಿ ಸದುಪಯೋಗ ಪಡೆದುಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಹೇಳಿದರು.

ಶಾಸಕ ಹಾಗೂ ವನವಾಸಿ ರಾಜ್ಯ ಕಾರ್ಯದರ್ಶಿ ಶಾಂತಾರಾಮ ಸಿದ್ದಿ ಮಾತನಾಡಿ, ವನವಾಸಿ ಸಮುದಾಯದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಗಳಾಗಿರುವುದು ಹೆಮ್ಮೆಯ ಸಂಗತಿ. ಇಂದಿನ ಯುವ ಪೀಳಿಗೆ ಅವರನ್ನು ಆದರ್ಶವಾಗಿ ನೋಡಬೇಕು. ಪ್ರಸ್ತುತ ಕ್ರೀಡಾಕೂಟದಲ್ಲಿ ಉತ್ತಮ‌ ಪ್ರದರ್ಶನ‌ ನೀಡಬೇಕು ಎಂದರು.

ಖ್ಯಾತ ಉದ್ಯಮಿ ಮಹಾದೇವ ಕರಮರಿ ಕ್ರೀಡಾ ಸ್ಪರ್ಧೆ ಉದ್ಘಾಟಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ, ರಾಜ್ಯ ಕ್ರೀಡಾ ಪ್ರಮುಖ ರವೀಂದ್ರ ಯಡಳ್ಳಿ, ವನವಾಸಿ‌ ಕಲ್ಯಾಣ ನಗರ ಸಮಿತಿ ಅಧ್ಯಕ್ಷ ಪ್ರಶಾಂತ ಬೆಲ್ಲದ, ಬಾಗು ಧಾಜು ಕೋಳಪ್ಪೆ,‌ಮಂಜುನಾಥ ದಾಸನಕೊಪ್ಪ  ಇತರರು ಪಾಲ್ಗೊಂಡಿದ್ದರು.

ಬಾಕ್ಸ್
ಕರ್ನಾಟಕದ 10 ಜಿಲ್ಲೆಗಳಿಂದ 115 ಮಹಿಳಾ ಹಾಗೂ 320 ಪುರುಷರು ಸೇರಿ ಒಟ್ಟು 435 ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಕಬ್ಬಡ್ಡಿ, ಖೋ ಖೋ ಹಾಗೂ ಬಿಲ್ಲುಗಾರಿಕೆ ಸ್ಪರ್ಧೆ ನಡೆಯಲಿದೆ. ನಾಳೆ ಅಂತಿಮ ಸುತ್ತಿನ ಪಂದ್ಯ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!