ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸು ಡಿಕ್ಕಿ, ರೈಲಿನ ಮುಂಭಾಗ ಜಖಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸು ಡಿಕ್ಕಿ ಹೊಡೆದಿದ್ದು, ರೈಲಿನ ಮುಂಭಾಗ ಜಖಂ ಆಗಿದೆ.

ಇತ್ತೀಚೆಗಷ್ಟೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಎಮ್ಮೆಗಳು ಡಿಕ್ಕಿ ಹೊಡೆದಿದ್ದವು. ಇದೀಗ ಇಂಥದ್ದೇ ಪ್ರಕರಣ ಮರುಕಳಿಸಿದ್ದು, ರೈಲಿನ ಮುಂಭಾಗ ಹಾನಿಯಾಗಿದೆ.

ಗುಜರಾತ್‌ನ ಅಟಲ್ ಸ್ಟೇಷನ್‌ಗೆ ತೆರಳುವಾಗ ಈ ಘಟನೆ ನಡೆದಿದ್ದು, ರೈಲ್ವೆ ಹಳಿ ಮೇಲೆ ನಿಂತಿದ್ದ ಹಸುವಿಗೆ ರೈಲು ಡಿಕ್ಕಿಯಾಗಿದೆ. ರೈಲಿನಲ್ಲಿದ್ದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಕೆಲ ಸಮಯ ರೈಲು ನಿಂತಿದ್ದು, ನಂತರ ಹೊರಟಿದೆ .

ಒಂದೇ ತಿಂಗಳಲ್ಲಿ ರೈಲು ಮೂರನೇ ಬಾರಿ ಡಿಕ್ಕಿಯಾಗಿದೆ. ಕಳೆದ ಬಾರಿ ಎಮ್ಮೆ ಡಿಕ್ಕಿಯಾದಾಗ ಎಮ್ಮೆಯ ಮಾಲೀಕರ ಮೇಲೆ ದೂರು ದಾಖಲಿಸಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!