ಕೆಸರುಗದ್ದೆಯಲ್ಲಿ ಬಿದ್ದರೂ ಕಂಬಳದ ರೇಸ್ ಮುಗಿಸಿ ಗೆದ್ದ ಜಾಕಿ-ವಿಡಿಯೊ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರಾವಳಿಯಲ್ಲಿ ಕಂಬಳದ ಸುಗ್ಗಿ ಬಂತೆಂದರೆ ಸಾಕು ನೋಡುಗರಿಗೂ, ಸ್ಪರ್ಧಾಳುಗಳಿಗೂ ಖುಷಿಯೋ ಖುಷಿ. ಅದರಲ್ಲೂ ಮೂಲ್ಕಿ ಸೀಮೆ ಅರಸು ಜೋಡುಕರೆ ಕಂಬಳ ಅಂತೂ ಭಾರೀ ಫೇಮಸ್!. ಕರಾವಳಿಯ ಸಾಂಪ್ರದಾಯಿಕ ಹಾಗೂ ಭಾವೈಕ್ಯತೆಯ ಸಂಕೇತವಾಗಿರುವ ಕಂಬಳಕ್ಕೆ ಎಲ್ಲಿಲ್ಲದ ಗೌರವ ಕೂಡ ಕೊಡಲಾಗುತ್ತದೆ.

ನಿನ್ನೆ ಸಂಜೆ 6ಗಂಟೆಗೆ ನಂದಳಿಕೆ ಕೋಣವನ್ನು ಓಡಿಸಿದ ಜಾಕಿ ಬಂಬ್ರಾಣಬೈಲು ವಂದಿತ್‌ ಶೆಟ್ಟಿ ಈ ಬಾರಿ ಗೆಲುವು ಸಾಧಿಸಿ ಚಿನ್ನ ಗೆದ್ದಿದ್ದಾರೆ. ಕಂಬಳ ಓಡಿಸುವಾಗ ಕೆಸರಿನಲ್ಲಿ ಬಿದ್ದರೂ ಛಲಬಿಡದೆ ಕೋಣಗಳ ಜತೆಗೆ ಹೋಗಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕಂಬಳಾಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!