CINE | ವರ್ತೂರ್ ಸಂತೋಷ್ ಮೋಸಗಾರ, ಯಾರೂ ಹೆಣ್ಣು ಕೊಡ್ಬೇಡಿ, ಮಾವ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್‌ನಿಂದಾಗಿ ಸುದ್ದಿಯಲ್ಲಿದ್ರು. ಇದೀಗ ವರ್ತೂರ್ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ವರ್ತೂರ್‌ಗೆ ಯಾರೂ ಹೆಣ್ಣು ಕೊಡಬೇಡಿ ಎಂದು ಅವರ ಮಾವ ಆರೋಪ ಮಾಡಿದ್ದಾರೆ.

ಫಾರ್ಮ್ ಇಂಡಿಯಾ-2 ಎನ್ನುವ ಯುಟ್ಯೂಬ್ ಚಾನೆಲ್ ವಿಡಿಯೋ ಇದಾಗಿದ್ದು, ಸಂತೋಷ್ ಮೋಸಗಾರ ಆತನ ವಿಧವಿಧದಲ್ಲಿ ಮೋಸ ಮಾಡ್ತಿದ್ದಾನೆ. ಅವನಿಗೆ ಯಾರೂ ಹೆಣ್ಣುಕೊಡಬೇಡಿ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ್ದು, ವರ್ತೂರ್ ಸಂತೋಷ್ ಮಾವ ಎನ್ನಲಾಗಿದೆ. ಈ ಹಿಂದೆಯಷ್ಟೇ ವರ್ತೂರ್ ಸಂತೋಷ್ ಮದುವೆ ಫೋಟೊ ವೈರಲ್ ಆಗಿತ್ತು. ಆದರೆ ಬಿಗ್‌ಬಾಸ್ ಮನೆಯಲ್ಲಿ ತನಗೆ ಮದುವೆ ಆಗಿಲ್ಲ ಎಂದು ಸಂತೋಷ್ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!