ಮನೆಯಂಗಳದಲ್ಲಿ ಮರಿಗೆ ಜನ್ಮ ನೀಡಿದ ಕಾಡಾನೆ!

ಹೊಸದಿಗಂತ ವರದಿ ಮಡಿಕೇರಿ:

ಕಾಡಾನೆಯೊಂದು ಮನೆಯ ಸಮೀಪದಲ್ಲೇ‌ ಮರಿಗೆ ಜನ್ಮ ನೀಡಿರುವ ಘಟನೆ ಕರಡ ಗ್ರಾಮದಲ್ಲಿ ನಡೆದಿದೆ.
ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಕಾಡುವಿನ ಮೊಣ್ಣಕುಟ್ಟಂಡ ಮಂಜು ಅವರ ಮನೆಯ ಬಳಿ ಕಾಡಾನೆಯೊಂದು ಸೋಮವಾರ ರಾತ್ರಿ ಹೆಣ್ಣುಮರಿಗೆ ಜನ್ಮ ನೀಡಿದ್ದು, ಮರಿಯು ಮಂಜು ಅವರ ಕೊಟ್ಟಿಗೆಯಲ್ಲಿದ್ದರೆ, ತಾಯಿ ಆನೆ ಸಮೀಪದ ತೋಟದಲ್ಲಿ ಮರಿಯಾನೆಯ ಆಗಮನಕ್ಕಾಗಿ ಕಾಯುತ್ತಾ ನಿಂತಿದೆ.

ಮನೆಯಂಗಳದಲ್ಲಿ ಕಾಡಾನೆ ಮರಿ ಹಾಕಿರುವ ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ತಂಡೋಪತಂಡವಾಗಿ ಜನರು ಆಗಮಿಸಿ ಮರಿಯಾನೆಯನ್ನು ವೀಕ್ಷಿಸುತ್ತಿದ್ದಾರೆ. ವಿಷಯ ತಿಳಿದ ವೀರಾಜಪೇಟೆ ಅರಣ್ಯ ವಲಯಾಧಿಕಾರಿ ಕಳ್ಳಿರ ದೇವಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!