INSPIRATION | ಈ “ಸಮಯ” ಎಲ್ಲಕ್ಕಿಂತ ಬುದ್ಧಿವಂತ ಮಾರ್ಗದರ್ಶಿಯಂತೆ ಹೌದಾ..!?

ಮೇಘ, ಮಂಗಳೂರು:

ನಮ್ಮ ದೈನಂದಿನ ಜೀವನದಲ್ಲಿ ಸಮಯ ಅನ್ನೋದು ಅತ್ಯಮೂಲ್ಯವಾದ ಪದವಾಗಿದೆ. ಒಬ್ಬ ವ್ಯಕ್ತಿಯ ಹುಟ್ಟಿನಿಂದ ಕೊನೆಯ ಉಸಿರಿನವರೆಗೂ ಇರುವ ಏಕೈಕ ಪದ ಅದು ಸಮಯ. ಸಮಯ ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಅವಶ್ಯಕವಾಗಿದೆ. ಸಮಯ ಎಂಬ ಪದವು ನಮ್ಮ ಜೀವನದ ಯಶಸ್ಸಿಗೆ ಕಾರಣವಾಗುತದೆ. ಸಮಯ ಮತ್ತು ಜೀವನ ಎರಡು ಬಹಳ ವಿಶೇಷ ನಂಟು ಹೊಂದಿದೆ. ಸಮಯ ಯಾರಿಗೂ ಕಾಯುವುದಿಲ್ಲ, ಆದ್ದರಿಂದ, ಪ್ರತಿಯೊಬ್ಬರೂ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಲು ಪ್ರಯತ್ನಿಸಬೇಕು.

ನನ್ನ ಪ್ರಕಾರ ಸಮಯ ಅಂದರೇ …

ಸಮಯ.. ಈ ಪದಾನೇ ಒಂಥರಾ ವಿಚಿತ್ರ! ಎಷ್ಟೋ ಬಾರಿ ಈ ಒಂದು ಪದ ಕೇಳಿದಾಗ ಅನ್ಸೋದು, ಹೇ .. ಒಂದು ಸಣ್ಣ ಕಥ ನೆನಪಾಗುತಿದೆ.. ನಾವೆಲ್ಲ ಸಣ್ಣವರಿದಾಗ ಈ ಸಮಯ ಬಗ್ಗೆ ತುಂಬ ಜನ ಕೆಲವೊಂದು ಬುದ್ದಿಮಾತು ಹೇಳಿರ್ತಾರೆ..

ಮನೇಲಿ ನಮ್ ಅಪ್ಪ ಅಮ್ಮ ಏನೇ ಮಾಡಬೇಕಾದರೂ ಇದೊಂದು ಪದ ಮಿಸ್ ಆಗ್ತಿರ್ಲಿಲ್ಲ ನೋಡಿ.. ಅದು ಯಾವದು ಅಂದ್ರೆ.. ನಿಂಗೆ ಇವಾಗ ಗೊತಾಗಲ್ಲ ನೀನು ನಮ್ ವಯಸ್ಸಿಗೆ ಬರ್ತ್ಯಲ್ಲ ಆಗ ಟೈಮ್ ಅಂದ್ರೆ ಏನು? ಅದರ ಇಂಪಾರ್ಟೆಂಟ್ ಏನು ಅಂತ ಗೊತ್ತಾಗುತ್ತೆ ಅಂತ ಹೇಳ್ತಿದ್ದ ನೆನಪು.

ಆದ್ರೆ ಆ ದಿನ ಇಷ್ಟು ಬೇಗ ಬರುತ್ತೆ ಅಂತ ಅನ್ಕೊಂಡಿರ್ಲಿಲ್ಲ…!

ಹೌದು, ಅಪ್ಪ-ಅಮ್ಮ ಹೇಳಿದ್ದು ಅವರ ವಯಸ್ಸಿಗೆ ಬಂದ ಮೇಲೆ ಗೊತ್ತಾಗುತ್ತೆ ಸಮಯದ ಬೆಲೆ ಏನು ಅಂತ..? ಆದ್ರೆ ಯಾಕೋ ತುಂಬ ಬೇಗನೆ ಗೊತಾಗೋಯ್ತು ಅನಿಸ್ತಿದೆ. ಚಿಕ್ಕವರಿದ್ದಾಗ ಕ್ಯಾರೆಲ್ಸ್ ಆಗಿ ಕೆಲವೊಂದು ಮಾತುಗಳನ್ನ ತಗೋತಾ ಇದ್ದೆ ಆಮೇಲೆ ಗೊತಾಗಿದ್ದು.. ಕ್ಯಾರೆಲ್ಸ್ ವಿಷಯ ಅಲ್ಲ.. ಬದಲಾಗಿ ನಾನೇ ಕ್ಯಾರೆಲ್ಸ್ ಆಗಿ ಇದ್ದೆ ಅಂತ..!

ಜೀವನದಲ್ಲಿ ತುಂಬಾ ಸಮಯ ಹಾಗೆ ಸುಮನ್ನೆ ವ್ಯರ್ಥ ಮಾಡಿಬಿಟ್ಟೆ..!

ನಿಜ, ಎಷ್ಟೋ ಸಮಯ ವ್ಯರ್ಥ ಮಾಡಿದ್ದೇನೆ.. ಬಹುಶಃ ಅವತ್ತು ಅರ್ಥ ಆಗಿದಿದ್ರೆ ಲೈಫ್ ಇನ್ನು ಚೆನ್ನಾಗಿ ಇರ್ತಿತ್ತು ಅನ್ಸುತ್ತೆ.. ತುಂಬಾ ಸಲ ಅನ್ಕೊಂಡಿದ್ದೆ ನಾನು ಸ್ವಲ್ಪ ಸಮಯಪ್ರಜ್ಞೆ ಇಟ್ಕೊಂಡಿದ್ರೆ ಲೈಫ್ ಇನ್ನು ಸೂಪರ್ ಆಗಿ ಇರ್ತಿತ್ತು ಅನ್ಸುತ್ತೆ..

ಇಷ್ಟಕ್ಕೂ ಸಮಯ ಹೇಳಿಕೊಟ್ಟಿದಾದ್ರು ಏನು..?

ಸಮಯ ಏನ್ ಹೇಳಿಕೊಟ್ಟಿಲ್ಲ ಎಲ್ಲಾನು ಹೇಳಿಕೊಟ್ಟಿದ್ದೆ ಈ ಸಮಯ.. ಜೀವನದಲ್ಲಿ ಜವಾಬ್ದಾರಿ ಇಲ್ದೆ ಇದ್ದಾಗ ಜವಾಬ್ದಾರಿ ಇಂದ ಯಾವ ರೀತಿ ಇರಬೇಕು ಅನ್ನೋದು ಈ ಸಮಯ ಹೇಳಿಕೊಟ್ಟಿದೆ. ಯಾಕೋ ಟೈಮ್ ಹೋಗ್ತಾನೆ ಇಲ್ವಲ್ಲ ಅಂತ ಕೂತಿದ್ದಾಗ, ಕಷ್ಟ ಪಟ್ಟು ಕೆಲಸ ಮಾಡಿದಾಗ ಮಾತ್ರ ಸಮಯ ಹೋಗೋದು ಅಂತ ತಿಳಿಸಿ ಕೊಟ್ಟಿದೆ ಈ ಸಮಯ.. ಯಾಕೋ ನನ್ನ ಟೈಮ್ ಸರಿ ಇಲ್ಲ ಗುರು ಅಂತ ಯಾವ್ದೋ ಒಂದು ಮೂಲೇಲಿ ಕುತ್ಕೊಂಡು ಯೋಚನೆ ಮಾಡುವಾಗ, ಸಮಯ ಸರಿಯಾಗೇ ಇದೆ ಆದ್ರೆ ನಾನು ಆ ಸಮಯಾನ ಸರಿಯಾಗಿ ಬಳಸಿಕೊಳ್ಳಬೇಕು ಅಂತ ಹೇಳಿಕೊಟ್ಟಿದೆ ಈ ಸಮಯ.. ಲೈಫ್ ಅಲ್ಲಿ ಒಳ್ಳೆ ಸಮಯಕ್ಕೆ ಕಾಯೋದಿಗಿಂತ ನಾವು ಒಳ್ಳೆ ಟೈಮ್ ನ ಸೃಷ್ಟಿ ಮಾಡ್ಕೊಬೇಕು ಅನ್ನೋದನ್ನ ಹೇಳಿಕೊಟ್ಟಿದೆ ಈ ಸಮಯ.!

ಈ ಮಧ್ಯೆ ಒಂದು ಮಾತು ನೆನಪಾಯಿತು…?

ಭಗವದ್ಗೀತೆಯಲ್ಲಿ ಒಂದು ಮಾತಿದೆ ಅದು ಏನಪ್ಪಾ ಅಂದ್ರೆ..? ಕೃಷ್ಣ, ಅರ್ಜುನನಿಗೆ ಒಂದು ಮಾತು ಕೇಳ್ತಾನೆ ಅಂತೆ.. ಅರ್ಜುನ ಈ ಕಲ್ಲಿನ ಮೇಲೆ ಒಂದು ಸಂದೇಶ ಬರೆಯಬೇಕು ಅದು ಹೇಗೆ ಇರಬೇಕು ಅಂದ್ರೆ .. ಮನುಷ್ಯರು ದುಃಖದಲ್ಲಿದ್ದಾಗ ಈ ಸಂದೇಶವನ್ನು ನೋಡಿ ಖುಷಿ ಪಡಬೇಕು .. ಖುಷಿಯಲ್ಲಿ ಇದ್ದವರು ಇದನ್ನು ನೋಡಿ ದುಃಖಪಡಬೇಕು ಅಂತಹ ಸಂದೇಶವನ್ನು ಬರೆಯಬೇಕು ಎಂದು ಕೃಷ್ಣ ಅರ್ಜುನನಿಗೆ ಹೇಳ್ತಾನೆ ಅಂತೆ..! ಅರ್ಜುನನಿಗೆ ಇದು ಯಾವತರ ಸಂದೇಶ ಅನ್ನೋದು ಗೊತಾಗಿಲ್ಲ.. ಆಗ ಕೃಷ್ಣ ಹೇಳ್ತಾನೆ .. ‘ಈ ಸಮಯ ಮರಳಿ ಬಾರದು’ ಎಂದು ಬರೆಯುತ್ತಾನೆ .. ಈ ಸಂದೇಶದ ಅರ್ಥ ಕೃಷ್ಣ ಹೇಳ್ತಾನೆ .. ಯಾವ ವ್ಯಕ್ತಿ ದುಃಖದಲ್ಲಿ ಇದ್ದಾಗ ಇದನ್ನು ಓದುತಾನೋ ಆತನಿಗೆ ಈ ಪದವನ್ನು ಕೇಳಿದಾಗ ಮುಖದಲ್ಲಿ ಒಂದು ಸಣ್ಣ ಮಂದಹಾಸ ಮೂಡುತ್ತೆ .. ಅದೇ ಖುಷಿಯಲ್ಲಿ ಇರೋ ವ್ಯಕ್ತಿ ಇದನ್ನು ಓದಿದಾಗ ಅಯ್ಯೋ .. ಈ ಸಮಯ ಮತ್ತೆ ಎಂದಿಗೂ ಮರಳಿ ಬರಲ್ವಲ್ಲ ಅಂತ ದುಃಖ ಪಡುತ್ತಾನೆ. ಆಗ ಗೊತಾಗುತ್ತೆ ಸಮಯದ ನಿಜವಾದ ಮಹತ್ವ ಏನು ಅಂತ ಹೇಳ್ತಾನೆ ಕೃಷ್ಣ ..! ವ್ಹಾ ಎಂಥ ಮಾತು ಅಲ್ವ ..

ಸಮಯ ಅನ್ನೋದು ನಮ್ಮದೇ ಕೈಯಲ್ಲಿರುವ ಅಮೂಲ್ಯವಾದ ವರ.. ಅದನ್ನ ಹೇಗೆ, ಯಾವ ರೀತಿಯಲ್ಲಿ, ಯಾವ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳುತ್ತೇವೆ ಅನ್ನೋದೇ ನಿಜವಾದ ಬುದ್ದಿವಂತಿಕೆ.. ಸಮಯ ಸರಿ ಇಲ್ಲ ಅಂತ ಸಮಯಕ್ಕೆ ಬಯ್ಯೋದಿಕ್ಕಿಂತ.. ನಮ್ಮನ್ನ ನಾವು ಸರಿ ಮಾಡಿಕೊಳ್ಳೋಕೆ ಸಮಯ ಕೊಡುವುದು ಬಹಳ ಮುಖ್ಯ. ಒಳ್ಳೆಯ ಕೆಲಸಕ್ಕೆ ಯಾವುದೇ ಸಮಯ ಬೇಡ, ಒಳ್ಳೆ ನಿರ್ಧಾರ, ನಂಬಿಕೆ, ದೃಢತೆ ಇದ್ರೆ ಒಳ್ಳೆಯ ಸಮಯ ತಾನಾಗೇ ನಮ್ಮ ಬಳಿ ಬರುತ್ತೆ. ಮೊದಲು ನಾವು ಸಮಯಕ್ಕೆ ಬೆಲೆ ಕೊಡೋದನ್ನ ಕಲಿತುಕೊಳ್ಳೋಣ.. ನಂತರ ಸಮಯ ನಮ್ಮ ಪರಿಶ್ರಮಕ್ಕೆ ಬೆಲೆ ಕೊಟ್ಟೆ ಕೊಡುತ್ತೆ .. ನೆನಪಿರಲಿ …

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!