ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್‌ನ ಯುವ ನಟ: ಅಭಿಮಾನಿಗಳ ಹಾರೈಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ನ ಯಂಗ್ ಹೀರೋ ವರುಣ್ ಧವನ್ ಸದ್ಯದಲ್ಲೇ ʻಭೇದಿಯಾʼ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಭಾರತದಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರ ನವೆಂಬರ್ 25 ರಂದು ಚಿತ್ರ ತೆರೆಗೆ ಬರಲಿದೆ. ಹಾಗಾಗಿ ಚಿತ್ರತಂಡದಿಂದ ಪ್ರಚಾರ ಕಾರ್ಯ ಶುರುವಾಗಿದೆ. ಈ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ವರುಣ್ ಧವನ್ ತಮಗಿರುವ ಅಪರೂಪದ ಕಾಯಿಲೆ ಬಗ್ಗೆ  ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವರುಣ್ ಧವನ್ ನಾನು ವೆಸ್ಟಿಬುಲರ್ ಹೈಪೋಫಂಕ್ಷನ್ ಎಂಬ ಕಾಯಿಲೆಯಿಂದ ಹೋರಾಡುತ್ತಿದ್ದೇನೆ. ಈ ಕಾಯಿಲೆಯಿಂದಾಗಿ ನಾನು ಇದ್ದಕ್ಕಿದ್ದಂತೆ ಬ್ಯಾಲೆನ್ಸ್‌ ಕಳೆದುಕೊಂಡು ಕೆಳಗೆ ಬೀಳುತ್ತೇನೆ. ಈ ವೆಸ್ಟಿಬುಲರ್ ಹೈಪೋಫಂಕ್ಷನ್ ಕಿವಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಕಿವಿಯ ಒಳಭಾಗವು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಕಿವಿ ಮತ್ತು ಮೆದುಳಿನ ನಡುವಿನ ಸಂಪರ್ಕಗಳು ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಪ್ರತಿದಿನ ತೊಂದರೆಯಾಗುತ್ತಿದೆ.

ಇದು ತಲೆಯ ಒಂದು ಭಾಗ ಮೇಲೆ ಮತ್ತು ಕೆಲವೊಮ್ಮೆ ಎರಡೂ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ತಲೆ ತಿರುಗುವ ಅನುಭವವಾಗುತ್ತದೆ. ಈ ಕಾಯಿಲೆ ಇರುವವರು ಏಕಾಏಕಿ ಸಮತೋಲನ ಕಳೆದುಕೊಂಡು ಬೀಳುವ ಸಾಧ್ಯತೆ ಹೆಚ್ಚಿದೆ ಎಂದರು. ಈ ಯುವ ಹೀರೋ ಕಾಯಿಲೆಯಿಂದ ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!