ಕಾರು ಚಾಲಕನ ನಿಧನದಿಂದ ವಿಚಲಿತನಾದ ವರುಣ್ ಧವನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ವರುಣ್ ಧವನ್ ಉತ್ತಮ ಸ್ನೇಹಿತನೊಬ್ಬನನ್ನು ಕಳೆದುಕೊಂಡಿದ್ದಾರೆ.
ಹೌದು, ವರುಣ್ ಕಾರ್ ಚಾಲಕ ಮನೋಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಹುಕಾಲದಿಂದ ವರುಣ್ ಜೊತೆ ಮನೋಜ್ ಕೆಲಸ ಮಾಡುತ್ತಿದ್ದು, ಇಬ್ಬರ ನಡುವೆ ಆತ್ಮೀಯ ಸಂಬಂಧ ಇತ್ತು. ಮನೋಜ್ ಸಾವಿನಿಂದ ವರುಣ್ ವಿಚಲಿತರಾಗಿದ್ದಾರೆ.

ಜಾಹೀರಾತು ಶೂಟ್ ಒಂದಕ್ಕೆ ವರುಣ್‌ರನ್ನು ಬಿಟ್ಟು ಬಂದ ನಂತರ ಎದೆನೋವು ಕಾಣಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವರುಣ್ ಶೂಟ್ ಕ್ಯಾನ್ಸಲ್ ಮಾಡಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದು, ಮನೋಜ್ ಕುಟುಂಬಕ್ಕೆ ನೆರವಾಗಿದ್ದಾರೆ.
ಕುಟುಂಬದ ಎಲ್ಲ ಜವಾಬ್ದಾರಿ ಹೊತ್ತುಕೊಳ್ಳಲು ವರುಣ್ ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!