ನಟ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಡೇಟಿಂಗ್? ಸುಳಿವು ನೀಡಿದ ಮತ್ತೊಬ್ಬ ಖ್ಯಾತ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಬಾಂಗ್‌ ಚಿತ್ರ ಸರಣಿಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರವ ನಟಿ ಸೋನಾಕ್ಷಿ ಸಿನ್ಹಾ ನೋಟ್‌ಬುಕ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿರುವ ಜಹೀರ್ ಇಕ್ಬಾಲ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ.
ಆದರೆ ಸೋನಾಕ್ಷಿ ಮತ್ತು ಜಹೀರ್ ತಾವು ʼಕೇವಲ ಸ್ನೇಹಿತರುʼ ಎಂದು ಸಮರ್ಥಿಸಿಕೊಂಡಿದ್ದಾರೆ ಆದರೆ ನಟ ವರುಣ್ ಶರ್ಮಾ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಸ್ಟೋರಿಯೊಣದು ಈ ಕುರಿತು ಬೇರೆಯದ್ದೇ ಸುಳಿವು ನೀಡುತ್ತಿದೆ.
ಗುರುವಾರ ರಾತ್ರಿ ಇನ್ಸ್ಟಾಗ್ರಾಮ್‌ ನಲ್ಲಿ ಈ ಇಬ್ಬರ ಫೋಟೋವನ್ನು ಹಂಚಿಕೊಂಡಿರುವ ವರುಣ್, “ಓಯೀ ಹೋಯೀ ಇಸೇ ಕೆಹ್ತೆ ಹೈ ಬ್ಲಾಕ್ಬಸ್ಟರ್ ಜೋಡಿ.” ಎಂದು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.
ಚಿತ್ರದಲ್ಲಿ ಸೋನಾಕ್ಷಿ ಮತ್ತು ಜಹೀರ್ ಅಕ್ಕಪಕ್ಕ ಕುಳಿತು ನಗುವನ್ನು ಹಂಚಿಕೊಳ್ಳುತ್ತಿದ್ದಾರೆ. ಸೋನಾಕ್ಷಿ ಅವರು ಬಿಳಿ ವಸ್ತ್ರದಲ್ಲಿ ಮಿಂಚುತ್ತಿದ್ದರೆ, ಜಹೀರ್ ಕಪ್ಪು ಮತ್ತು ಬಿಳಿ ಶರ್ಟ್‌ನಲ್ಲಿ ಕೂಲ್ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ವರದಿಗಳನ್ನು ನಂಬುವುದಾದರೆ, ಸದ್ಯ ಈ ಜೋಡಿ ಮ್ಯೂಸಿಕ್‌ ಆಲ್ಬಂ ಒಂದರ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ. ಈ ಸಂಗೀತ ವೀಡಿಯೊದ ಬಿಡುಗಡೆ ಜೊತೆಗೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಚಿತ್ರರಂಗದಲ್ಲೂ ಸಕ್ರಿಯರಾಗಿರುವ ಸೋನಾಕ್ಷಿ ʼಡಬಲ್ ಎಕ್ಸ್‌ಎಲ್‌ʼ ಚಿತ್ರದಲ್ಲಿ ಹುಮಾ ಖುರೇಷಿ ಮತ್ತು ಜಹೀರ್ ಇಕ್ಬಾಲ್ ಅವರೊಂದಿಗೆ ನಟಿಸುತ್ತಿದ್ದಾರೆ. ರಿತೇಶ್ ದೇಶ್‌ಮುಖ್ ಮತ್ತು ಸಾಕಿಬ್ ಸಲೀಮ್ ಅವರೊಂದಿಗೆ ಕಾಕುಡ ಎಂಬ ಹಾಸ್ಯ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.
ಆಕೆಯ ಸಹೋದರ ಕುಶ್ ಸಿನ್ಹಾ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರಲಿರುವ ʼನಿಕಿತಾ ರಾಯ್ ಅಂಡ್ ದಿ ಬುಕ್ ಆಫ್ ಡಾರ್ಕ್ನೆಸ್‌ʼ ಚಿತ್ರೀಕರಣದಲ್ಲಿ ಶೀಘ್ರದಲ್ಲೇ ತೊಡಗಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!